ಲಾಲಾ ಲಜಪತ್ ರಾಯ್ ಜನ್ಮ ದಿನ, ಪ್ರಧಾನಿ ಗೌರವ ನಮನ

ನವದೆಹಲಿ, ಜನವರಿ 28  ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರ ಜನ್ಮ ದಿನದ ಅಂಗವಾಗಿ  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.  ಭಾರತದ ಧೈರ್ಯಶಾಲಿ ಪುತ್ರ ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್  ಜನ್ಮ ದಿನಾಚರಣೆಯಂದು ಅವರಿಗೆ ಗೌರವ ನಮನಗಳು, ರಾಯ್  ಅವರು ಮಾಡಿದ  ತ್ಯಾಗ ಯಾವಾಗಲೂ ದೇಶವಾಸಿಗಳಿಗೆ ಸದಾ ಸ್ಫೂರ್ತಿ ನೀಡಲಿದೆ  ಎಂದೂ  ಪ್ರಧಾನಿ ಹಿಂದಿಯಲ್ಲಿ  ಟ್ವಿಟ್ಟರ್  ಬರೆದಿದ್ದಾರೆ. ಜನವರಿ 28, 1865 ರಂದು ಜನಿಸಿದ ಲಾಲಾ ಲಜಪತ್ ರಾಯ್ 1928 ರ ನವೆಂಬರ್ 17 ರಂದು ಕೊನೆಯುಸಿರೆಳೆದರು.