ಬಂಗಾರದಂತಹ ಮನಸ್ಸಲ್ಲಿ ಲಕ್ಷ್ಮೀ ನೆಲೆಸುತ್ತಾಳೆ: ಅಪ್ಪಣ ಶ್ರೀ

ಲೋಕದರ್ಶನ ವರದಿ

ವಿಜಯಪುರ 20: ತಪ್ಪಲ ಬಂಗಾರದಿಂದ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಪ್ರತಿಯೊಬ್ಬರಲ್ಲಿ ಬಂಗಾರದಂತಹ ಮನಸ್ಸಿರಬೇಕು ಅಂದಾಗ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎಂದು ಹಡಪದ ಅಪ್ಪಣ ಶ್ರೀಗಳು ಹೇಳಿದರು.ವೆಂಕಟೇಶ ನಗರ ಬಡಾವಣೆಯ ಮಹಾಲಕ್ಷ್ಮೀ ಕ್ಷೇಮಾಭಿವೃದ್ಧಿ ಸಂಘ ವಿಜಯಪುರ ವತಿಯಿಂದ ಹಮ್ಮಿಕೊಂಡ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

                ಬಂಗಾರವನ್ನು ಕಳ್ಳ ಕಾಕರು ಕನ್ನ ಹಾಕಬಹುದು ಆದರೆ ಬಂಗಾರದಂತ ಮನಸ್ಸು ಇದ್ದರೆ ಅದನ್ನು ಯಾರು ಕದಿಯುವುದಿಲ್ಲ. ಪ್ರತಿಯೊಬ್ಬರ ಮನಸ್ಸು ಬಂಗಾರದಂತಿರುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ತಮ್ಮಲ್ಲಿರುವ ದುಷ್ಟಗುಣಗಳನ್ನು ಕಳೆದುಕೊಳ್ಳಬೇಕಾದರೆ ಧ್ಯಾನ, ಸ್ತುತಿ ಮಾಡಬೇಕು ಎಂದರು.

                ಸಂದರ್ಭದ ಸಿದ್ಧರಾಮ ಶ್ರೀಗಳು ಮಾತನಾಡಿ, ವಿಜಯ ದಶಮಿಯಂದು ಹೆಣ್ಣು ದೇವರು ಆದ ಮಹಾಲಕ್ಷ್ಮೀ ಹಲವರಿಗೆ ಹಲವು ಅವತಾರಗಳಲಿ ಅವತರಿಸುತ್ತಾಳೆ. ದೇ ಎಂದರೆ ದೇಹ ವಿ ಅಂದರೆ ವಿಚಾರ ದೇವಿ ವಿಚಾರಗಳನ್ನು ಯಾರು ಅಳವಡಿಸಿಕೊಂಡಿರುತ್ತಾರೆ ಅವರು ದೇವರಿಗೆ ಸಮಾನ ಎಂದು ಹೇಳಿದರು.

ಸಂದರ್ಭದಲ್ಲಿ ಅಧ್ಯಕ್ಷ ಬಸವರಾಜ ಶಿವಶರಣರ ಮಾತನಾಡಿ, ಸರ್ವ ಸೃಷ್ಠಿಗೆ ಮೂಲಾಧಾರ ಲಕ್ಷ್ಮೀದೇವಿ ಆಕೆ ಜಗನ್ಮಾತೆ. ಪಾರ್ವತಿದೇವಿ. ತಾಯಿಯು ವಿವಿಧ ಸಂದರ್ಭಗಳಲ್ಲಿ ವಿವಿಧ ರೂಪಗಳಲ್ಲಿ ಅವತರಿಸಿ ದುಷ್ಟ ಶಿಕ್ಷಣ. ಶಿಷ್ಟ ರಕ್ಷಣೆಯನ್ನು ಮಾಡಿದಳು. ಬ್ರಹ್ಮ, ವಿಷ್ಣು, ಮಹೇಶ್ವರರು ತ್ರಿಮೂತರ್ಿಗಳು ಲಕ್ಷ್ಮೀ ಪಾರ್ವತಿ ಸರಸ್ವತಿ ಇವರು ವಿದ್ಯೆಗೆ, ಲಕ್ಷ್ಮೀದೇವಿಯು ಧನ ಧಾನ್ಯ ಹಾಗೂ ಸಮೃದ್ಧಿಗಳನ್ನು ನಿರ್ವಹಿಸಿದೇ ಪಾರ್ವತಿ ದೇವಿಯು ಮಾತ್ರ ದುಷ್ಟರನ್ನು ಸಕ್ರಮ ಮಾರ್ಗದಲ್ಲಿ ಇಡುವುದು ಲೋಕಗಳನ್ನನು ದುಷ್ಟರಿಂದ ರಕ್ಷಿಸುವ ಹೊಣೆಯನ್ನು ಹೊತ್ತಿದ್ದಾಳೆ. ಜಗನ್ಮಾತೆಯನ್ನು ಮನಸಾರೆ ಧ್ಯಾನಿಸಿ ಯಾವ ಹೆಸರಿನಿಂದ ಕರೆದರೂ ಆಕೆಯು ಪ್ರಸನ್ನಳಾಗುತ್ತಾಳೆ. ನವರಾತ್ರಿಯಲ್ಲಿ ಲೋಕಕಂಟಕನಾದ ಮಹಿಶಾಸುರನಂದಿಗೆ, ಕಾಳಿಕಾ ರೂಪದಲ್ಲಿ ಯುದ್ಧವನ್ನು ಮಾಡಿದಳು. ಪಾಡಮಿಯ ದಿನದಂದು ಪ್ರಾರಂಭವಾಗಿ ಒಂಬತ್ತು ದಿನಗಳ ಕಾಲ ಮುಂದುವರಿದು ಹತ್ತನೇಯ ದಿನ ಜಗನ್ಮಾತೆಯ ಕಾಳಿಕಾ ದೇವಿಯ ರೂಪದಲ್ಲಿ ಮಹಿಶಾಸುರನನ್ನು ಸಂಹರಿಸಿದಳು. ದಿನ ದಶಮಿ ವಿಜಯವನ್ನು ಸಾಧಿಸಿದ ದಿನ ಆದ್ದರಿಂದ ದಿನವನ್ನು ವಿಜಯದಶಮಿಯೆಂದು ಕರೆಯುತ್ತಾರೆ. ಸಂದರ್ಭದಲ್ಲಿ ಮಹಾದೇವಿ ಗೋಕಾಕ, ರವೀಂದ್ರ ಮೇಡೆಗಾರ ಮಾತನಾಡಿದರು.ಉಪಾಧ್ಯಕ್ಷರಾದ ದಾವು ಕೇಸು ರಾಠೋಡ, ಚಂದ್ರಶೇಖರ ಸಿ. ಮೈಲಿಕರ, ಹರಿದಾಸ ವಿಠ್ಠಲ ವಾಲೀಕಾರ, ಸಂತೋಷ . ಮೈಲಿಕರ, ರಂಗಪ್ಪ ಕಾಮರಡಿ, ಅಶೋಕ . ನಾಟಿಕಾರ, ರಾಮಚಂದ್ರ ವಾಘ್ಮೋರೆ, ರುದ್ರಪ್ಪ ಪಟ್ಟಣ, ಗಿರಿಮಲ್ಲಪ್ಪ ಕವಟಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.