ಲೋಕದರ್ಶನವರದಿ
ಗುಳೇದಗುಡ್ಡ16: ಜಿಲ್ಲೆಯ ಪ್ರತಿಷ್ಠಿತ ಲಕ್ಷ್ಮೀ ಸಹಕಾರಿ ಬ್ಯಾಂಕಿ ನಿದರ್ೇಶಕ ಮಂಡಳಿ ಚುನಾವಣೆಗೆ ರವಿವಾರ ಬಾಲಕರ ಸಕರ್ಾರಿ ಪಪೂ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 9ಗಂಟೆಯಿಂದ ಸಂಜೆ 4ಗಂಟೆಯವರೆಗೆ ನಡೆದ ಮತದಾನ ಶಾಂತಿಯುತವಾಗಿ ನಡೆಯಿತು. ಚುನಾವಣೆ ನಿಮಿತ್ತ ಚುನಾವಣಾಧಿಕಾರಿ ತಹಸೀಲ್ದಾರ ಜಿ.ಎಂ.ಕುಲಕಣರ್ಿ ಕಟ್ಟು ನಿಟ್ಟಿನ ಕ್ರಮವಹಿಸಿದ್ದರು.
ಒಟ್ಟು 3072ಮತಗಳಿದ್ದು, ಅದರಲ್ಲಿ 1980 ಮತಗಳು ಚಲಾಯಿಸಲಾಗಿದ್ದು, ಶೇ.62ರಷ್ಟು ಮತದಾನವಾಗಿದೆ. ಶಾಂತಿ ಹಾಗೂ ಸುವ್ಯವಸ್ಥಿತವಾಗಿ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳು, ಪೊಲೀಸ್ ಇಲಾಖೆ ಸೂಕ್ರ ಕ್ರಮಕೈಗೊಂಡಿತ್ತು. ಮತಗಟ್ಟೆ ಕೇಂದ್ರಗಳ ಸುತ್ತಮುತ್ತ ಸೇರಿದಂತೆ ಒಟ್ಟು 25 ಸಿಸಿ ಕ್ಯಾಮರಾ ಅಳವಡಿಸಿ, ಪ್ರತಿಯೊಂದು ಮತಗಟ್ಟೆ ಮೇಲೆ ನಿಗಾವಹಿಸಲಾಗಿತ್ತು. ಚುನಾವಣೆಯಲ್ಲಿ ಒಟ್ಟು 22 ಅಭ್ಯಥರ್ಿಗಳು ಕಣದಲ್ಲಿದ್ದು, ಒಟ್ಟು 3072 ಮತದಾರರಿದ್ದು, 15 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಈ ಚುನಾವಣಾ ಕಾರ್ಯದಲ್ಲಿ 140 ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಡಿವೈಎಸ್ಪಿ ನಂದರೆಡ್ಡಿ, ಹುನಗುಂದದ ಸಿಪಿಐ ಅಯ್ಯನಗೌಡ ಪಾಟೀಲ, ಬಾದಾಮಿ ಸಿಪಿಐ ರಮೇಶ ಹಾನಾಪೂರ, ಬಾಗಲಕೋಟ ಗ್ರಾಮೀಣ ಠಾಣೆಯ ಪಿಎಸ್ಐ ರಾಮನಗೌಡ ಸಂಕನಾಳ, ಅಮಿನಗಡ ಪಿಎಸ್ಐ ತಿಪ್ಪರೆಡ್ಡಿ ಅವರು ಬಂದೂಬಸ್ತ್ ಒದಗಿಸಿದ್ದರು. 22 ಜನ ಪೋಲಿಸ್ ಸಿಬ್ಬಂದಿಗಳು, 1 ಡಿಎಆರ್ ವಾಹನವನ್ನು ಚುನಾವಣಾ ಕಾರ್ಯಕ್ಕೆ ನೇಮಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಹಾಯಕ ಚುನಾವನಾಧಿಕಾರಿ ಆರ್.ಬಿ.ಬೂದಿ, ಪ್ರಧಾನ ವ್ಯವಸ್ಥಾಪಕ ಆರ್.ಎಂ.ಕಬಾಡಿ ಸೇರಿದಂತೆ ಇತರರು ಇದ್ದರು.
ರದ್ದುಗೊಂಡ ಮತದಾರರಲ್ಲಿ ಬೇಸರ: ಚುನಾವಣೆಯಲ್ಲಿ ಮತ ಚಲಾಯಿಸಲು ಬಂದಿದ್ದ ಬ್ಯಾಂಕಿನ ಹಲವು ಶೇರುದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದು ಕಂಡು ಬಂದಿತು.
ನಾವು ವಾಷರ್ಿಕ ಸಭೆಗಳಲ್ಲಿ ಹಾಜರಾಗಿದ್ದೇವೆ ಆದರೂ ನಮ್ಮದು ಏಕೆ ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಚುನಾವಣಾ ಸಿಬ್ಬಂದಿಗಳನ್ನು ಪ್ರಶ್ನಿಸುತ್ತಿರುವುದು ಕಂಡು ಬಂದಿತು. ತಹಶೀಲ್ದಾರರ ಕಟ್ಟು ನಿಟ್ಟಿನ ಮುಂಜಾಗ್ರತಾ ಕ್ರಮದಿಂದ ಮತದಾನದುದ್ದಕ್ಕೂ ಯಾವುದೇ ಅಹಿತಕರ ಘಟನೆಗಳು ಜರುಗಲಿಲ್ಲ.