ಕೆರೆ ತುಂಬಿಸುವ ಯೋಜನೆ ಶೀಘ್ರದಲ್ಲಿ ಆರಂಭ: ಮಾಧುಸ್ವಾಮಿ

ಲೋಕದರ್ಶನ ವರದಿ

ಯಲಬುಗರ್ಾ 10: ಸರಕಾರದಿಂದ ಇಗಾಗಲೇ ಹಣ ಬಿಡುಗಡೆಯಾಗಿದ್ದು ಮುಂಬರುವ ದಿನಗಳಲ್ಲಿ ಕೆರೆ ತುಂಬಿಸುವ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ ಮಾದುಸ್ವಾಮೀ ಹೇಳಿದರು. 

ಪಟ್ಟಣದ ಕೆಂಪು ಕೆರೆಗೆ ಬೇಟಿ ನೀಡಿ ಕೆರೆ ವೀಕ್ಷಿಸಿ ಅವರು ಮಾತನಾಡಿದರು. ಸಣ್ಣ ನೀರಾವರಿ ಇಲಾಖೆಯಿಂದ ಬಿಡುಗಡೆಯಾಗಿರುವ ಅನುಧಾನದಲ್ಲಿ ಕೆರೆ ಅಭಿವೃದ್ಧಿ ಪಡಿಸಲಾಗುವದು ಮತ್ತು ನೀರು ಸಂಗ್ರಹಿಸಲು ವ್ಯವಸ್ಥೆ ಮಾಡಲಾಗುವದು ಈ ಕೆರೆ ಕಾಮಗಾರಿಯ ವೇಗ ಹೆಚ್ಚಾಗಬೇಕು ಮತ್ತು ಉತ್ತಮ ಗುಣಮಟ್ಟದ ಕಾಮಗಾರಿ ನಡೆಯಬೇಕು ಎಂದರು.

ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಮುಖಂಡರಾದ ನವೀನಕುಮಾರ ಗುಳಗಣ್ಣನವರ, ಬಸವಲಿಂಗಪ್ಪ ಭೂತೆ, ಸಿ ಎಚ್ ಪೋಲಿಸ್ ಪಾಟೀಲ, ಕಳಕನಗೌಡ ಜುಮಲಾಪೂರ, ವೀರಣ್ಣ ಹುಬ್ಬಳ್ಳಿ, ಮಲ್ಲಿಖಾಜರ್ುನ ನರೇಗಲ್, ತಾಪಂ ಉಪಾದ್ಯಕ್ಷ ವೀಶ್ವನಾಥ ಮರಿಬಸಪ್ಪನವರ, ಸದಸ್ಯರಾದ ಶರಣಪ್ಪ ಈಳಗೇರ, ರಾಮಣ್ಣ ಹೊಸಮನಿ, ಸೇರಿದಂತೆ ಪಪಂ ಎಲ್ಲಾ ಸದಸ್ಯರು ಅಧಿಕಾರಿಗಳು ಹಾಜರಿದ್ದರು.