ಲೋಕದರ್ಶನವರದಿ
ಸಿಂದಗಿ19: ಪಟ್ಟಣದ ಕೆರೆಯ ತಡೆಗೋಡೆ ಬಿರುಕು ಬಿಟ್ಟಿರುವ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ದೂರು ಸಲ್ಲಿಸಲಾಗಿತ್ತು ಅದರನ್ವಯ ಬೆಳಗಾವಿ ಸಣ್ಣ ನಿರಾವರಿ ಇಲಾಖೆಯಿಂದ ಮಂಜೂರಿ ದೊರೆತ್ತಿತ್ತು ಅದನ್ನು ಅಧಿಕಾರಿಗಳು ವೀಕ್ಷಿಸಲು ಆಗಮಿಸಿದ ಸಂದರ್ಭದಲ್ಲಿ ಶಾಸಕ ಎಂ.ಸಿ.ಮನಗೂಳಿ ಅಧಿಕಾರಿಗಳಿಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ಸಿ.ಮನಗೂಳಿ ಮಾತನಾಡಿ, 1994ರಲ್ಲಿ ರಾಜ್ಯದಲ್ಲಿ ಜೆ.ಎಚ್.ಪಟೇಲ ಸರಕಾರದ ಅವದಿಯಲ್ಲಿ ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಪಟ್ಟಣದ ಜನತೆಗೆ ಕುಡಿಯಲು ನೀರಿಲ್ಲದೆ ಹಾಹಾಕಾರ ಉಲ್ಬಣವಾಗಿತ್ತು ಆ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ 20 ಸಾವಿರ ಜನಸಂಖ್ಯೆಗೆ ನೀರು ಪೂರೈಕೆಗನುಗುಣವಾಗಿ ಸುಮಾರು 11 ಲಕ್ಷಗಳ ವೆಚ್ಚದಲ್ಲಿ ಕೆರೆ ನಿಮರ್ಾಣ ಮಾಡಿ ಯರಗಲ್ ಗ್ರಾಮದ ಬಳಿಯಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಉಪಕಾಲುವೆಯಿಂದ ಪೈಪಲೈನ್ ಮುಖಾಂತರ ಸಿಂದಗಿ ಪಟ್ಟಣ ಕೆರೆಗೆ ನೀರು ತರಲಾಗಿತ್ತು ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಜನಪ್ರತಿನಿಧಿಗಳಾಗಲಿ ಹಾಗೂ ಪುರಸಭೆ ಅಧಿಕಾರಿಗಳು ಯಾವುದೇ ದುರಸ್ಥಿ ಕಾರ್ಯಕ್ಕೆ ಮುಂದಾಗದೇ ನಿರ್ಲಕ್ಷ ತೊರಿರುವುದರಿಂದ ಅಲ್ಲದೆ ಈಗೀನ 50 ಸಾವಿರ ಜನಸಂಖ್ಯೆಗೆ ನೀರು ಪೂರೈಕೆಗೆ ನೀರಿನ ಪ್ರಮಾಣ ಹೆಚ್ಚು ಬಳಕೆಯಾಗಿರುವುದರಿಂದ ಕೆರೆಗೆ ನೀರಿನ ಒತ್ತಡ ಹೆಚ್ಚಾಗಿ ತಡೆಗೋಡೆ ಬಿರುಕು ಬಿಟ್ಟು ಜನರಲ್ಲಿ ಆತಂಕ ಮನೆ ಮಾಡಿತ್ತು ಅದರ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳ ಸಂಪರ್ಕಕ್ಕೆ ತೆಗೆದುಕೊಂಡು ದುರಿಸ್ಥಿ ಕಾರ್ಯ ಕೈಕೊಳ್ಳಲು ರೂ.1 ಕೋಟಿಗಳನ್ನು ಮಂಜೂರು ಪಡೆದು ಇದೀಗ ಟೆಂಡರ ಕರೆಯಲಾಗಿದ್ದು ತೀವ್ರಗತಿಯಲ್ಲಿ ಕಾಮಗಾರಿ ಪ್ರಾರಂಭಿಸಿ ಅಚ್ಚುಕಟ್ಟಾಗಿ ಹಾಗೂ ಗುಣಮಟ್ಟದ ಕಾಮಗಾರಿ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಸಣ್ಣ ನೀರಾವರಿ ಇಲಾಖೆಯ ಸುಪ್ರಡೆಂಟ್ ಇಂಜನೀಯರ ಸತೀಶಕುಮಾರ, ಇಂಡಿ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜನೀಯರ ಬಿ.ವೈ.ಬಿರಾದಾರ, ಗುತ್ತಿಗೆದಾರ ಎಸ್.ಸಿ.ಕನರ್ಾಳ ಹಾಗೂ ತಂತ್ರಜ್ಞಾನ ಅಧಿಕಾರಿಗಳು ಮತ್ತು ಶಾಸಕರ ಆಪ್ತ ಸಹಾಯಕ ಪ್ರಸನ್ನಕುಮಾರ ಜೇರಟಗಿ ಇದ್ದರು.