ಕೊಪ್ಪಳ: ಕಾಮರ್ಿಕ ಇಲಾಖೆಯ ಶ್ರಮ ಸಾಮಥ್ರ್ಯ ವೃತ್ತಿ ತರಬೇತಿಯಂತಹ ಯೋಜನೆಗಳಿಂದ ಸಾವಿರಾರು ಜನರು ಸ್ವಾವಲಂಬಿ ಬದುಕು ನಡೆಸಲು ಸಹಕಾರಿಯಾಗಿವೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಬುಧವಾರ (ಅ.02) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾಮರ್ಿಕ ಇಲಾಖೆ, ನಿಮರ್ಿತಿ ಕೇಂದ್ರ, ಕೊಪ್ಪಳ, ಕರ್ನಾಟಕ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕ ಕಲ್ಯಾಣ ಮಂಡಳಿ, ಬೆಂಗಳೂರು, ವಸತಿ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ನಿಮರ್ಾಣ ಕೇಂದ್ರ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರಮ ಸಾಮಥ್ರ್ಯ ವೃತ್ತಿ ತರಬೇತುದಾರರಿಗೆ ಸಲಕರಣೆ ಪೆಟ್ಟಿಗೆ, ಸುರಕ್ಷತಾ ಪೆಟ್ಟಿಗೆ ಹಾಗೂ ಪ್ರಮಾಣ ಪತ್ರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಕಾಮರ್ಿಕನೂ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುತ್ತಾನೆ. ಹಿಂದಿನ ಕಾಲದಲ್ಲಿ ವೃತ್ತಿ ಆಧಾರಿತ ಜಾತಿ ವ್ಯವಸ್ಥೆ ಇತ್ತು. ಆದರೆ ಇಂದು ಯಾವುದೇ ಜಾತಿಯ ವ್ಯಕ್ತಿ ಯಾವುದೇ ವೃತ್ತಿಯನ್ನಾದರೂ ಮಾಡಬಹುದು. ಕಾಯಕಕ್ಕೆ ಜಾತಿ ಇಲ್ಲ ಎಂಬಂತೆ ತಮ್ಮ ಕುಲಕಸುಬು ಅಲ್ಲದಿದ್ದರೂ ಬಹಳಷ್ಟು ಜನ ಕ್ರಿಯಾಶೀಲ ವೃತ್ತಿಯನ್ನು ಕಲಿತು ತಮ್ಮ ಜೀವನೋಪಾಯದ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಿಂದ ಅಲ್ಪ ಮಟ್ಟಿನ ಆಥರ್ಿಕ ಸ್ವಾವಲಂಬನೆಯನ್ನು ಗ್ರಾಮೀಣ ಜನರು ಪಡೆದಿದ್ದಾರೆ. ನಗರ ಪ್ರದೇಶಗಳಲ್ಲಿ ಕಟ್ಟಡ ನಿಮರ್ಾಣ, ವಿದ್ಯುತ್ ಕಾಮಗಾರಿಗಳು, ನೀರು ಸರಬರಾಜಿಗೆ ಸಂಬಂಧಿಸಿದ ಕೌಶಲಾಧಾರಿತ ಕಾರ್ಯಗಳಲ್ಲಿ ವೃತ್ತಿ ಪರ ತರಬೇತಿಯನ್ನು ಪಡೆದು ಸ್ವತಂತ್ರವಾಗಿ ಕಾರ್ಯ ನಿರ್ವಹಣೆ ಮಾಡಲು ಸಶಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾಮರ್ಿಕರಿಗೆ ನೀಡಲು ಶ್ರಮಿಸಿ ಎಂದು ಅವರು ಹೇಳಿದರು.
ಜಿಲ್ಲೆಯ ಕಾಮರ್ಿಕರು ಮುಖ್ಯವಾಗಿ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು ಗುರುತಿನ ಚೀಟಿಯನ್ನು ಪಡೆಯಬೇಕು. ಗುರುತಿನ ಚೀಟಿಯು ಕಾರ್ಮಿಕನಿಗೆ ಮಾತ್ರವಲ್ಲದೇ ಅವರ ಕುಟುಂಬದ ಎಲ್ಲರಿಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಕಾಮರ್ಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆಗೆ ಇಲಾಖೆಯಿಂದ ಸಹಾಯಧನ ನೀಡಲಾಗುತ್ತದೆ. ರೂ. 2 ಲಕ್ಷದವರೆಗೆ ಆರೋಗ್ಯ ವಿಮೆ, ರೂ. 5 ಲಕ್ಷದವರೆಗೆ ಅಪಘಾತ ವಿಮೆ, ಮನೆ ಕಟ್ಟಲು ಸಹಾಯಧನ, ಮರಣೋತ್ತರ ಪರಿಹಾರ ನಿಧಿಯನ್ನು ಇಲಾಖೆಯಿಂದ ನೀಡಲಾಗುತ್ತದೆ. ಅಲ್ಲದೇ ಕಾಮರ್ಿಕರ ಗುರುತಿನ ಚೀಟಿಯಿಂದ ಯಾವುದೇ ಕಾಮಗಾರಿ ಸ್ಥಳದಲ್ಲಿ ಸುಲಭವಾಗಿ ಕೆಲಸ ಪಡೆಯಬಹುದು. ಆದ್ದರಿಂದ ಕಾಮರ್ಿಕರು ಮೊದಲು ಗುರುತಿನ ಚೀಟಿ ಪಡೆಯುವುದನ್ನು ಮರೆಯಬೇಡಿ. ಎಂದಿಗೂ ಆತ್ಮಸ್ಥೈರ್ಯ ಹಾಗೂ ಸಕಾರಾತ್ಮಕ ಯೋಚನೆಗಳನ್ನು ಹೊಂದಿರಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಮಾತನಾಡಿ, ಶ್ರಮ ಸಾಮಥ್ರ್ಯ ವೃತ್ತಿ ತರಬೇತಿಯು ಕಾರ್ಮಿಕರಿಗೆ ವೃತ್ತಿ ತರಬೇತಿಯನ್ನು ಮಾತ್ರ ನೀಡದೇ ಅಕ್ಷರ ಜ್ಞಾನವನ್ನೂ ನೀಡುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ 27,303 ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದು, 6085 ಕ್ಕೂ ಹೆಚ್ಚು ನೋಂದಾಯಿತ ಕಾಮರ್ಿಕರು ಇಂದು ಇಲಾಖೆಯ ವಿವಿಧ ಸೌಲಭ್ಯಗಳನ್ನು ಪಡೆದಿದ್ದಾರೆ. ಜಿಲ್ಲೆಯ ತರಬೇತಿ ಕೇಂದ್ರದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ವ್ಯವಸ್ಥಿತ ತರಬೇತಿಗೆ ಯೋಜನೆ ರೂಪಿಸಿದೆ. ಈ ತರಬೇತಿಯಿಂದ ಕಾಮರ್ಿಕರು ಆಥರ್ಿಕ ಸದೃಢತೆಯನ್ನು ಸಾಧಿಸಬಹುದು. ಕಾರ್ಮಿಕರ ಗುರುತಿನ ಚೀಟಿ ಪಡೆದವರು ತಮ್ಮ ಮಕ್ಕಳ ಒಂದರಿಂದ ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಲಾಗುತ್ತದೆ. ಪಿ.ಎಚ್.ಡಿ, ಎಂ.ಬಿ.ಬಿ.ಎಸ್ ನಂತಹ ಉನ್ನತ ವ್ಯಾಸಂಗಕ್ಕೆ ಅಗತ್ಯ ಹಣಕಾಸಿನ ಸಹಾಯವನ್ನು ಪಡೆಯಬಹುದು. ಕಾಮರ್ಿಕರ ಮಕ್ಕಳಿಗೆ ಜನನದಿಂದ ಮರಣದವರೆಗೆ 14 ಯೋಜನೆಗಳನ್ನು ಪಡೆಯಬಹುದಾಗಿದೆ. ಸ್ಕಾಲರ್ಶಿಪ್, ಆರೋಗ್ಯ ವಿಮೆಯಂತಹ ಉತ್ತಮ ಲಾಭಗಳನ್ನು ಪಡೆಯಬಹುದು. ಇಲಾಖೆಯ ವಿವಿಧ ಸೌಲಭ್ಯಗಳನ್ನು ಒದಗಿಸಲು ಕಾರ್ಮಿಕ ಬಂಧುಗಳನ್ನು ನೇಮಕ ಮಾಡಲಾಗಿದೆ. ಮಧ್ಯಮವತರ್ಿಗಳ ಕಾಟವಿಲ್ಲದೆ ಕಾಮರ್ಿಕ ಬಂಧುಗಳೇ ನೇರವಾಗಿ ಕಾರ್ಮಿ ಕರಿಗೆ ತರಬೇತಿಗೆ ಪ್ರೋತ್ಸಾಹಿಸುವುದು, ಇಲಾಖೆಯ ಸೌಲಭ್ಯಗಳನ್ನು ಒದಗಿಸುವ ಕಾರ್ಯ ನಿರ್ವಹಿಸುತ್ತಾರೆ. ಎಲೆಕ್ಟ್ರಿಷಿಯನ್, ಪ್ಲಂಬಿಂಗ್, ಅಥರ್್ ವಕರ್್, ಡಿಸೈನ್ ಪೇಂಟಿಂಗ್, ಟೈಲ್ಸ್ ವಕರ್್ ಸೇರಿದಂತೆ ಒಟ್ಟು 21 ತರಬೇತಿಗಳನ್ನು ಇಲಾಖೆಯಿಂದ ನೀಡಲಾಗುತ್ತದೆ. ಇಲ್ಲಿಯವರೆಗೂ ಕಟ್ಟಡ ನಿಮರ್ಾಣಕ್ಕೆ ಸಂಬಂಧಿಸಿದ ತರಬೇತಿಗಳನ್ನು ಜಿಲ್ಲೆಯಲ್ಲಿ ನೀಡಲಾಗಿದೆ. ವಿವಿಧ ಕಾರ್ಯಗಳಲ್ಲಿ ಆಸಕ್ತಿ ಇದ್ದವರು 30 ಜನರನ್ನೊಳಗೊಂಡ ತಂಡದೊಂದಿಗೆ ಬಂದರೆ ಅವರ ಆಸಕ್ತಿ ವಿಷಯದನುಸಾರ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗುತ್ತದೆ. ಈಗ ತರಬೇತಿ ಪಡೆದವರು ತಮ್ಮ ಗ್ರಾಮದ ಇತರರನ್ನು ಪ್ರೋತ್ಸಾಹಿಸಿ ತರಬೇತಿ ಕುರಿತು ಜಾಗೃತಿ ಮೂಡಿಸಿ. ತಾಲ್ಲೂಕುವಾರು ತರಬೇತಿ ನೀಡುವ ಯೋಜನೆ ಇದ್ದು, ಶೀಘ್ರದಲ್ಲೇ ತಾಲ್ಲೂಕು ಕೇಂದ್ರದಲ್ಲಿಯೇ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಮಿ ಕ ಇಲಾಖೆ ಅಧಿಕಾರಿ ರಮೇಶ ಎಸ್. ತರಬೇತಿ ಹಾಗೂ ಇಲಾಖೆಯ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಜಿಲ್ಲೆಯ ನಿರ್ಮಿತಿ ಕೇಂದ್ರದ ಶಶಿಧರ ಪಾಟೀಲ, ತರಬೇತಿ ಕೇಂದ್ರದ ಮಾಸ್ಟರ್ ಟ್ರೇನರ್ ಶಿವಪ್ರಸಾದ ಸೇರಿದಂತೆ ತರಬೇತಿ ಪಡೆದ ಕಾರ್ಮಿಕರು ಉಪಸ್ಥಿತರಿದ್ದರು. ತರಬೇತಿ ಪಡೆದ ಕಾರ್ಮಿಕರಿಗೆ ಸಲಕರಣೆ ಪೆಟ್ಟಿಗೆ, ಸುರಕ್ಷತಾ ಪೆಟ್ಟಿಗೆ, ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ತರಬೇತಿ ಪಡೆದ ಕಾಮರ್ಿಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.