ಹಗಲಿರುಳು ಬೆವರು ಬಸಿಯುತ್ತಿರುವ ಶ್ರಮ ಜೀವಿಗಳ ಕಷ್ಟವನ್ನು ಸ್ಮರಿಸುವ ದಿನವೇ ಕಾರ್ಮಿಕ ದಿನಾಚರಣೆ : ಚನ್ನಮ್ಮ ಗಡಕರಿ
Labor Day is a day to remember the hardships of working people who sweat day and night: Channamma Ga
ರಾಯಬಾಗ 01 : ತನ್ನ ಹಾಗೂ ತನ್ನ ಕುಟುಂಬದ ಹೊಟ್ಟೆ ತುಂಬಿಸುವಷ್ಟು ಆಹಾರ ಸಂಪಾದಿಸಲು ಇನ್ನೊಬ್ಬರ ಅಡಿಯಾಳಾಗಿ ಹಗಲಿರುಳು ಬೆವರು ಬಸಿಯುತ್ತಿರುವ ಶ್ರಮ ಜೀವಿಗಳ ಕಷ್ಟವನ್ನು ಸ್ಮರಿಸುವ ದಿನವೇ ಕಾರ್ಮಿಕ ದಿನಾಚರಣೆ ಎಂದು ಸಿಐಟಿಯು ತಾಲೂಕಾ ಅಧ್ಯಕ್ಷೆ ಚನ್ನಮ್ಮ ಗಡಕರಿ ಹೇಳಿದರು. ಪಟ್ಟಣದ ಅಭಾಜಿ ವೃತ್ತದ ಬಳಿ ಕಾರ್ಮಿಕ ದಿನಾಚರಣೆ ನಿಮಿತ್ಯ ಜೀವಿತದ ಕೊನೆಯವರೆಗೂ ಬಡವರಿಗಾಗಿ, ಕೂಲಿ ಕಾರ್ಮಿಕರಿಗಾಗಿ ಸಂಘಟನೆಯ ಮುಖಾಂತರ ಸರಕಾರವನ್ನು ನಡುಗಿಸಿದ ಕಾರ್ಮಿಕ ಮುಖಂಡ ದಿ.ವಿ.ಪಿ.ಕುಲಕರ್ಣಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಇಂದು ಸರಕಾರಗಳು ಬಂಡವಾಳ ಶಾಹಿಗಳ ಜೇಬು ತುಂಬಿಸಿ ದುಡಿಯುವ ವರ್ಗದವರಿಗೆ ಕನಿಷ್ಟ ಕೂಲಿಯನ್ನೂ ಕೊಡುತ್ತಿಲ್ಲ.
ಪ್ರತಿಯೊಂದು ವಸ್ತುವಿನ ಬೆಲೆ ಏರುತ್ತಲೇ ಇದೆ. ಮದುವೆಗಳಲ್ಲಿ ಕನಿಷ್ಟ ತಾಳಿಯನ್ನು ಕೊಳ್ಳಲಾಗುತ್ತಿಲ್ಲ. ಶ್ರೀಮಂತರು, ಬಡವರಿಗೆ ಸಹಾಯ ಮಾಡುವಷ್ಟು ಹೃದಯವಂತರಲ್ಲ. ಒಂದು ಕಡೆ ಪ್ರೀತಿ ತೋರಿಸಿ, ಮತ್ತೊಂದು ಕಡೆ ಕತ್ತಿ ಮಸೆಯುವುದು. ಸರಕಾರದ ಮೂಲ ಮಂತ್ರ. ಹೀಗಾಗಿ ಬಂಡವಾಳ ಶಾಹಿಗಳು ಸಾವಿರಾರು ಕೋಟಿಯ ಮಾಲೀಕರು, ಬೆಳಗಿನಿಂದ ಸಾಯಂಕಾಲದವರೆಗೆ ದುಡಿದು ಸಂಜೆ ಕೂಲಿಗಾಗಿ ಮಾಲೀಕರ ಮನೆಯ ಮುಂದೆ ಕೈ ಚಾಚುವವರು ದುಡಿಯುವ ಕಾರ್ಮಿಕರು. ಭಾರತ ದೇಶಕ್ಕೆ ಬಡತನವಿಲ್ಲ. ಆದರೆ ದೇಶದ ಒಳಗಡೆ ರಕ್ತ ಬಸಿದು ಬದುಕು ಕಟ್ಟಿಕೊಳ್ಳುವ ಬಡವರಿಗೆ ಸಾಕಷ್ಟು ಬಡತನವಿದೆ ಎಂದು ಸರಕಾರದ ನಿಲುವನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ನೌಕರರ ಸಂಘದ ಕೃಷ್ಣಾ ಸಲಗರೆ, ಲಕ್ಷಣ ತೋಳೆ, ಯುಸೂಫ ಮಕಾನದಾರ, ಗೋಪಾಲ ಜಲಾಲಪೂರ, ಭಾರತಿ ಜೋಗಣ್ಣವರ, ಮಾಲಾ ಪತ್ತಾರ,, ಆಯೇಷಾ ದೇಸಾಯಿ, ಜಯಶ್ರೀ ಕಾನಟ್ಟಿ, ಪಲ್ಲವಿ ಕಾಂಬಳೆ, ಉಮಾಶ್ರೀ ಗಡಕರಿ, ಮಾಲು ಮಠಪತಿ, ಭಾರತಿ ಗಚ್ಚಿ, ಕಾವೇರಿ ನಿಲಜಗಿಮಠ, ಶೋಭಾ ನಿಂಗಣ್ಣವರ, ಮಹಾನಂದಾ ಕಾಂಬಳೆ, ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯತಿ, ಬೀದಿ ಬದಿಯ ವ್ಯಾಪಾರಸ್ಥರು ಹಾಗೂ ಅನೇಕ ದುಡಿಯುವ ವರ್ಗದವರು ಉಪಸ್ಥಿತರಿದ್ದರು. ರಾಯಬಾಗ 01 : ಪಟ್ಟಣದ ಅಭಾಜಿ ವೃತ್ತದ ಬಳಿ ಕಾರ್ಮಿಕ ಮುಖಂಡ ದಿ.ವಿ.ಪಿ.ಕುಲಕರ್ಣಿಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಐಟಿಯು ತಾಲೂಕಾ ಅಧ್ಯಕ್ಷೆ ಚನ್ನಮ್ಮ ಗಡಕರಿ ಕಾರ್ಮಿಕ ದಿನಾಚರಣೆಯ ಬಗ್ಗೆ ಮಾತನಾಡಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 