ಲೇಬಗೇರಿ ಗ್ರಾ.ಪಂ: ರೋಜಗಾರ್ ದಿನಾಚರಣೆ ಯಶಸ್ವಿ

ಕೊಪ್ಪಳ 28: ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದ ಹತ್ತಿರದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಐಇಸಿ ಕಾರ್ಯಕ್ರಮದಡಿ (ಫೆ.28) ರೋಜಗಾರ್ ದಿನಾಚರಣೆಯನ್ನು ಆಚರಿಸಲಾಯಿತು.

ತಾಲೂಕ ಪಂಚಾಯತಿಯ ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯ ಮಾರ್ಗಸೂಚಿ ಪ್ರಕಾರ ಪ್ರತಿ ದಿನಕ್ಕೆ ರೂ. 249 ರಷ್ಟು ಕೂಲಿಯನ್ನು ನಿಗದಿಪಡಿಸಿದ್ದು, ಪ್ರತಿಯೊಬ್ಬ ಕೂಲಿಕಾರನು ಅಳತೆಗನುಗುಣವಾಗಿ ಕೆಲಸ ನಿರ್ವಹಿಸಿದಲ್ಲಿ ಅವರಿಗೆ ರೂ. 249 ರಷ್ಟು  ಕೂಲಿ ಹಣ ಪಾವತಿಸಲಾಗುತ್ತದೆ. ಕಡಿಮೆ ಅಳತೆ ಬಂದಲ್ಲಿ ಅವರ ಕೆಲಸದ ಅಳತೆಗೆ ತಕ್ಕಂತೆ ಕೂಲಿ ಹಣ ಪಾವತಿಸಲಾಗುವುದು. ಕಾಮಗಾರಿ ನಡೆದ ಸಂದರ್ಭದಲ್ಲಿ ಪ್ರತಿಯೊಬ್ಬರು ಬಹಳ ಜಾಗ್ರತೆಯಿಂದ ಕೂಲಿ ಕೆಲಸ ನಿರ್ವಹಿಸಬೇಕು. ಗುದ್ದಲಿ, ಸಲಿಕೆಯಿಂದ ಕೆಲಸ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಎಲ್ಲರೂ ಎಚ್ಚರ ವಹಿಸಬೇಕು. ಪ್ರತಿಯೊಬ್ಬ ಕೂಲಿಕಾರರು ಗುಳೆ ಹೋಗದೇ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕೂಲಿ ಕೆಲಸ ನಿರ್ವಹಿಸಿ ಕೂಲಿ ಪಡೆದು ಆಥರ್ಿಕವಾಗಿ ಸಬಲರಾಗಬೇಕೆಂದು ಹೇಳಿದರು.

ತಾಲೂಕ ಪಂಚಾಯತಿ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಎಂಜಿಎನ್ಆರ್ಇಜಿಎ ಯೋಜನೆಯಡಿಯಲ್ಲಿ ಪ್ರತಿ ಗ್ರಾಮ ಪಂಚಾಯತಿಯಿಂದ ಶೇ.60 ರಷ್ಟು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕಾಮಗಾರಿಗಳನ್ನು ಕಡ್ಡಾಯವಾಗಿ ಅನುಷ್ಠಾನಿಸಲು ಹಲವಾರು ಕಾಮಗಾರಿಗಳ ವಿಧಗಳನ್ನು ಜಾರಿಗೆ ತಂದಿದ್ದು, ಕೆರೆ ಅಭಿವೃದ್ಧಿ, ಕಣ ನಿಮರ್ಾಣ, ನಮ್ಮ ಹೊಲ ನಮ್ಮ ರಸ್ತೆ, ಆಟದ ಮೈದಾನ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿಗಳಲ್ಲಿ ಕೂಲಿಕಾರರು ಕೆಲಸ ನಿರ್ವಹಿಸಿ ಕೂಲಿಯನ್ನು ತಮ್ಮ ಬ್ಯಾಂಕ್ ಖಾತೆಗೆ ಪಡೆಯಲು ಅರ್ಹರು. ಕೂಲಿಕಾರರು ತಾವು ನಿರ್ವಹಿಸಿದ ಕೆಲಸಕ್ಕೆ ತಕ್ಕ ಕೂಲಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗದಿದ್ದಲ್ಲಿ ರೋಜಗಾರ್ ದಿನಾಚರಣೆಯಲ್ಲಿ ಭಾಗವಹಿಸಿ ತಮ್ಮ ಕುಂದು-ಕೊರೆತೆಗಳನ್ನು ಇತ್ಯರ್ಥಪಡಿಸಿಕೊಳ್ಳಲು  ಸಹಕಾರಿಯಾಗಿದೆ. ಸಕರ್ಾರದ ಸುತ್ತೋಲೆಗಳಿಗೆ ನಾವೆಲ್ಲರೂ ಬದ್ದರಾಗಿ ಈ ಯೋಜನೆಯಲ್ಲಿ ಭಾಗವಹಿಸಿ ಕೂಲಿ ನಿರ್ವಹಿಸಿ ಪ್ರತಿ ದಿನಕ್ಕೆ ರೂ. 249 ರಷ್ಟು ಕೂಲಿ ಪಡೆದು ಆಥರ್ಿಕವಾಗಿ ಸಬಲರಾಗಬೇಕು. ಪ್ರಸಕ್ತ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕೂಲಿಕಾರರಿಗೆ ಕೂಲಿ ಕೆಲಸ ಒದಗಿಸಲು ನಮೂನೆ-6 ಭತರ್ಿ ಮಾಡುವುದು, ಕಾಮಗಾರಿ ಸ್ಥಳದಲ್ಲಿ ಅಳತೆ ನೀಡುವುದು, ಅಳತೆ ಪಡೆಯುವುದು, ಹಾಜರಿ ತೆಗೆದುಕೊಳ್ಳುವುದು, ಕೂಲಿಕಾರರಿಗೆ ಕೂಲಿ ಹಣ ಜಮಾ ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು ಇನ್ನೂ ಮುಂತಾದವುಗಳ ಕುರಿತು 30 ರಿಂದ 35 ಜನರ ಒಂದು ತಂಡಕ್ಕೆ ಒಬ್ಬ ಕಾಯಕ ಬಂಧುವನ್ನು ನೇಮಿಸಬೇಕು. ಇವರು ಗ್ರಾಮ ಪಂಚಾಯತಿ ಮತ್ತು ಕೂಲಿಕಾರರ ನಡುವೆ ಸಮನ್ವಯ ಸಾಧಿಸಲು ಕೂಲಿಕಾರರು ತಮ್ಮಲ್ಲಿ ಅಂತಹವರನ್ನು ನೇಮಿಸಿಕೊಳ್ಳಲಾಗುತ್ತಿದೆ. ಎಲ್ಲಾ ಕೂಲಿಕಾರರು ಅವರಿಗೆ ಸಹಕಾರ ನೀಡಿ ಪ್ರತಿಯೊಬ್ಬರು ಯೋಜನೆಯ ಸದ್ಭಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂಗಮೇಶ ತೇರಿನ, ತಾಂತ್ರಿಕ ಸಹಾಯಕ ಮಂಜುನಾಥ ಮೇಟಿ, ಕೂಲಿಕಾರರು, ಕಾಯಕ ಬಂಧು ಅಂಬಮ್ಮ, ಗ್ರಾಮ ಪಂಚಾಯತಿ ಸಿಬ್ಬಂದಿ ಬಸವರಾಜ, ನಿಂಗಪ್ಪ ಸೇರಿದಂತೆ ಇತರರು ಹಾಜರಿದ್ದರು.