ಬೈಲಹೊಂಗಲ: ಅಂಗನವಾಡಿಯಲ್ಲಿ ಎಲ್ಕೆಜಿ, ಯುಕೆಜಿ ತರಗತಿ ಆರಂಭಿಸುವಂತೆ ಮನವಿ

ಲೋಕದರ್ಶನ ವರದಿ

ಬೈಲಹೊಂಗಲ 19:  ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುವಂತೆ ಒತ್ತಾಯಿಸಿ, ತಾಲೂಕಿನ ಅಂಗನವಾಡಿ ಕಾರ್ಯಕತರ್ೆಯರು ಪಟ್ಟಣದ ಚನ್ನಮ್ಮಾ ಸಮಾಧಿ ಸ್ಥಳದಿಂದ ಬೃಹತ ಪ್ರತಿಭಟನಾ ಮೆರವಣಿಗೆಯ ಮೂಲಕ ತಹಶೀಲ್ದಾರ ಕಚೇರಿಗೆ ಆಗಮಿಸಿ ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ ಅವರ ಮುಖಾಂತರ ಸಕರ್ಾರದ  ಮುಖ್ಯ ಕಾರ್ಯದಶರ್ಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು. 

ಸಿಐಟಿಯು ಅಧ್ಯಕ್ಷೆ ವಿದ್ಯಾ ಕಮ್ಮಾರ, ಕಾರ್ಯದಶರ್ಿ ವಿಜಯಾ ಕಲಾದಗಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಅಂಗನವಾಡಿ ಕಾರ್ಯಕತರ್ೆಯರು ಕಡಿಮೆ ವೇತನದಲ್ಲಿ ಕಳೆದ 30 ವರ್ಷಗಳಿಂದ 3 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಪೌಷ್ಠಿಕ ಆಹಾರ, ಪೂರ್ವ ಪ್ರಾಥಮಿಕ ಶಿಕ್ಷಣ ನೀಡಿ ತಮ್ಮ ಜೀವನ ನಡೆಸುತ್ತಿದ್ದಾರೆ. ದಿ. 17.5.2019 ರ ಸಕರ್ಾರದ ಆದೇಶದ ಪ್ರಕಾರ ಸಕರ್ಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ನಡೆಸಿ, ಪ್ರತ್ಯೇಕ ಶಿಕ್ಷಕ, ಶಿಕ್ಷಕಿಯರನ್ನು ನಿಯೋಜಿಸಿ ಶಿಕ್ಷಕರ ಗೌರವಧನ ಹೆಚ್ಚಿಸಿ ಮಕ್ಕಳಿಗೆ ಬೇಕಾಗುವ ಪೌಷ್ಠಿಕ ಆಹಾರವನ್ನು ಕೊಡಲಾಗುವದು ಎದು ಆದೇಶ ಮಾಡಿ ಸಕರ್ಾರ ಅಂಗನವಾಡಿ ಕಾರ್ಯಕತರ್ೆಯರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. 

ಸರ್ಕಾರದ  ಯೋಜನೆ ರೂಪಿಸುವ ಮೊದಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ತಜ್ಞರ ಜೊತೆ ಚಚರ್ಿಸದೇ ಏಕಮುಖವಾಗಿ ಆದೆಶ ಮಾಡಲಾಗಿದೆ. ಈಗಾಗಲೇ 1975 ರ ಐಸಿಡಿಎಸ್ ಯೋಜನೆಯಡಿಯಲ್ಲಿ 16,40,170 3-6 ವರ್ಷದ ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗಿದ್ದಾರೆ. ಈ ಮಕ್ಕಳು ಸಕರ್ಾರದ ನೂತನ ಯೋಜನೆ ಅನ್ವಯ ಸಕರ್ಾರಿ ಶಾಲೆಗಳಿಗೆ ದಾಖಲಾದರೇ ಅಂಗನವಾಡಿ ಕೇಂದ್ರಗಳ ಅವಶ್ಯಕತೆ ಇರುವದಿಲ್ಲ ಇದರಿಂದ ಸಾವಿರಾರು ಅಂಗನವಾಡಿ ಕಾರ್ಯಕತರ್ೆಯರು ಬೀದಿಗೆ ಬರೂವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ಸರ್ಕಾರ ಕೂಡಲೇ ತಮ್ಮ ಆದೇಶವನ್ನು ಪುನರ ಪರಿಶೀಲನೆ ನಡೆಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಈ ತರಗತಿಗಳನ್ನು ನಡೆಸಬೇಕು. ಮಕ್ಕಳ ಪೂರ್ವ ಶಿಕ್ಷಣ ಅಂಗನವಾಡಿ ಕೇಂದ್ರಗಳಲ್ಲಿ ನಡೆದು ಮಕ್ಕಳ ಪಾಲನೆ ಜೊತೆಗೆ ಕಲಿಕೆಯನ್ನು ಕಾರ್ಯಕತರ್ೆಯರು ಮಕ್ಕಳಿಗೆ ನೀಡುತ್ತಿರುವದರಿಂದ ಹಾಗೂ ಪದವಿ ಪೂರ್ವ, ಪದವಿ ಶಿಕ್ಷಣ ಪಡೆದಿದ್ದು ಅವರಿಗೆ ನೂತನ ತರಗತಿಗಳ ಬಗ್ಗೆ ತರಬೇತಿ ನೀಡಿದರೆ ಅನುಭವದಿಂದ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನು ನಡೆಸಲು ಆದೆಶ ಮಾಡುವದಾಗಬೇಕೆಂದರು. 

ಸುಶಿಲಾ ಪಿಸೆ, ಸುನೀತಾ ಅಂಟಿನ, ಮಲ್ಲಮ್ಮ ಮಠಪತಿ, ಚನ್ನಮ್ಮಾ ಮತ್ತಿಕೊಪ್ಪ, ವಿಮಲಾ ತಮ್ಮಣ್ಣವರ, ಶಾಮತಾ ಮಾಳಗಿ, ಮಹಾದೇವಿ ಕಿರೋಜಿ, ರಾಜೇಶ್ವರಿ ಛಬ್ಬಿ ಹಾಗೂ ನೂರಾರು ಕಾರ್ಯಕತರ್ೆಯರು ಇದ್ದರು.