ಅದ್ಧೂರಿ ಲವರ್

ಬೆಂಗಳೂರು, ಮಾ 03, ‘ಕಿಸ್’ ಮೂವಿಯಿಂದ ಜನರಿಗೆ ಮುತ್ತು ಕೊಟ್ಟ ಹುಡುಗ ವಿರಾಟ್ ಇನ್ಮುಂದೆ ‘ಅದ್ಧೂರಿ ಲವರ್’ ಆಗಲಿದ್ದು, ಸಂಜಾನ ಜತೆ ಪ್ರೆಮಕಥೆ ನಡೆಸಲು ಹೊರಟಿದ್ದಾನೆ. ಚಿತ್ರಕ್ಕೆ ಭರತ್ ರಾಘವೇಂದ್ರ ನಿರ್ದೇಶನವಿರಲಿದ್ದು, ಎ ಪಿ ಅರ್ಜುನ್ ಹಾಗೂ ವಿರಾಟ್ ಕಾಂಬಿನೇಷನ್ ನ ಎರಡನೇ ಚಿತ್ರ ಇದಾಗಲಿದೆ. ಈ ತಿಂಗಳಿನಿಂದಲೇ ಶೂಟಿಂಗ್ ಪ್ರಾರಂಭವಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ.