ಶ್ರೀನಗರಮಾರ್ಚ್ 11, ಹೊಸ ಭೂಕುಸಿತ , ಪ್ರತಿಕೂಲ ಹವಾಮಾನದ ಕಾರಣ 270 ಕಿ.ಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಸಂಚಾರ ಮತ್ತೆ ಸ್ಥಗಿತವಾಗಿದೆ. ಈ ನಡುವೆ ಲಡಾಕ್ನ ಕೇಂದ್ರಾಡಳಿತ ಪ್ರದೇಶವನ್ನು (ಯುಟಿ) ಕಾಶ್ಮೀರದೊಂದಿಗೆ ಸಂಪರ್ಕಿಸುವ ಬೀಕನ್ ಹೆದ್ದಾರಿಯಲ್ಲಿ ಬೃಹತ್ ಹಿಮ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.ಹಿಮದ ಕಾರಣ 434 ಕಿ.ಮೀ ಉದ್ದದ ಶ್ರೀನಗರ-ಲೇಹ್ ಹೆದ್ದಾರಿ ಕಳೆದ ಮೂರು ತಿಂಗಳಿನಿಂದ ಮುಚ್ಚಿದೆ. 86 ಕಿ.ಮೀ ಉದ್ದದ ಐತಿಹಾಸಿಕ ಮೊಘಲ್ ರಸ್ತೆ ಮತ್ತು ಅನಂತ್ನಾಗ್-ಕಿಶ್ತ್ವಾರ್ ರಸ್ತೆ ಕಳೆದ ಎರಡು ತಿಂಗಳುಗಳಿಂದ ಹಿಮದ ಕಾರಣ ಮುಚ್ಚಿದೆ. ಸಂಚಾರ ಮತ್ತು ಎನ್ಎಚ್ಎಐ ಅಧಿಕಾರಿಗಳಿಂದ ಹಸಿರು ನಿಶಾನೆ ದೊರಕಿದ ನಂತರ ಲ್ ಬಂದ ನಂತರ ಸಂಚಾರ ಮತ್ತೆ ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದಿನ 48 ಗಂಟೆಗಳಲ್ಲಿ ಹೆಚ್ಚಿನ ಹಿಮ ಮತ್ತು ಮಳೆಯಾಗುವ ಮುನ್ಸೂಚನೆ ಇದೆ ಎಂದರು. ಶ್ರೀನಗರ-ಜಮ್ಮು ಹೆದ್ದಾರಿಗೆ ಪರ್ಯಾಯ ರಸ್ತೆಯ ಮೂಲಕ ಹೋಗಲು ಇನ್ನೂ ಎರಡು ತಿಂಗಳು ಸಮಯ ಬೇಕಾಗುತ್ತದೆ. ಹಿಮದಿಂದಾಗಿ ಅನಂತ್ನಾಗ್-ಕಿಶ್ತ್ವಾರ್ ರಸ್ತೆ ಸಹ ಮುಚ್ಚಲ್ಪಟ್ಟಿದ್ದು ಸಂಚಾರಕ್ಕೆ ತೊಂದರೆಯಾಗಿದೆ ಎಂದೂ ಅವರು ಹೇಳಿದರು.