ಭೂಕುಸಿತ: ಶ್ರೀನಗರ-ಜಮ್ಮು ಹೆದ್ದಾರಿ ಮತ್ತೆ ಬಂದ್

ಶ್ರೀನಗರ, ಮಾರ್ಚ್ 7, ಮಳೆ ಮತ್ತು ಭೂಕುಸಿತಗಳಿಂದಾಗಿ ಕಾಶ್ಮೀರ ಕಣಿವೆಯನ್ನು ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆಯಾದ 270 ಕಿ.ಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಶನಿವಾರ ಮುಚ್ಚಿದ ನಂತರ ಎರಡನೇ ದಿನ ಕಾಶ್ಮೀರ ಕಣಿವೆವು ದೇಶದ ಇತರ ಭಾಗಗಳೊಂದಿಗೆ ಸಂಪರ್ಕವನ್ನು ಸಂಪೂರ್ಣ ಕಳೆದುಕೊಂಡಿದೆ. . ಭೂಕುಸಿತದಿಂದಾಗಿ ಎರಡು ದಿನದ ನಂತರ ಗುರುವಾರ ಹೆದ್ದಾರಿಯಲ್ಲಿ ಸಂಚಾರವನ್ನು ಪುನರಾರಂಭಿಸಲಾಗಿತ್ತು. 86 ಕಿ.ಮೀ ಉದ್ದದ ಐತಿಹಾಸಿಕ ಮೊಘಲ್ ರಸ್ತೆ ಮತ್ತು ಅನಂತ್ನಾಗ್-ಕಿಶ್ತ್ ವಾರ್ ರಸ್ತೆ ಕಳೆದ ಎರಡು ತಿಂಗಳಿನಿಂದ ಹಿಮ ಶೇಖರಣೆಯಾಗಿ ಮುಚ್ಚಲ್ಪಟ್ಟಿವೆ. ರಂಬಾನ್ ಮತ್ತು ರಮ್ಸು ನಡುವಿನ ಹಲವು ಸ್ಥಳಗಳಲ್ಲಿ ಹೊಸದಾಗಿ ಭೂಕುಸಿತಗಳಿಂದಾಗಿ ಹೆದ್ದಾರಿಯಲ್ಲಿನ ಸಂಚಾರವನ್ನು ಎರಡನೇ ದಿನ ಸ್ಥಗಿತಗೊಳಿಸಲಾಗಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಇಂದು ಬೆಳಿಗ್ಗೆ ಯುಎನ್ಐಗೆ ತಿಳಿಸಿದ್ದಾರೆ.ಭೂಕುಸಿತದ ಅವಶೇಷಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಈಗಾಗಲೇ ಅತ್ಯಾಧುನಿಕ ಯಂತ್ರಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿದೆ. ಇಂದು ಮುಂಜಾನೆ ಮತ್ತೆ ಭೂಕುಸಿತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಎನ್ಎಚ್ಎಐ ಮತ್ತು ಸಂಚಾರಿ ಪೊಲೀಸ್ ಅಧಿಕಾರಿಗಳಿಂದ ಸೂಚಿಸಿದ ನಂತರವೇ ಸಂಚಾರವನ್ನು ಪುನರಾರಂಭಿಸಲಾಗುವುದು. ಹೆದ್ದಾರಿಯ ವಿವಿಧ ಸ್ಥಳಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ. ರಂಬಾನ್ ಮತ್ತು ರಮ್ಸು ನಡುವಿನ ಹಲವು ಸ್ಥಳಗಳಲ್ಲಿ ರಸ್ತೆ ತುಂಬಾ ಕಿರಿದಾಗಿದ್ದು, ಹಾನಿಗೊಂಡಿರುವ ಕಾರಣ ಹೆದ್ದಾರಿಯಲ್ಲಿ ಮುಂದಿನ ಆದೇಶದವರೆಗೆ ಏಕಮುಖ ಸಂಚಾರ ಮಾತ್ರ ಹೆದ್ದಾರಿಯಲ್ಲಿ ಮುಂದುವರಿಯುತ್ತದೆ ಎಂದು ಅವರು ತಿಳಿಸಿದ್ದಾರೆ.