ಕೇರಳದ ತೆಕ್ಕಡಿಯಲ್ಲಿ ಎಲ್ .ಕೆ. ಅಡ್ವಾಣಿ

ಕೊಟ್ಟಾಯಂ, ಜ 08 ಮಾಜಿ ಉಪ ಪ್ರಧಾನಿ ಎಲ್ .ಕೆ. ಅಡ್ವಾನಿ ಅವರು ಅಲ್ಪದಿನಗಳ ವಿಶ್ರಾಂತಿಗಾಗಿ ಕೇರಳದ ಇಡುಕ್ಕಿ ಜಿಲ್ಲೆಯ ಸುಪ್ರಸಿದ್ದ ಪ್ರವಾಸಿ ಸ್ಥಳ ತೆಕ್ಕಡಿಯಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಬುಧವಾರ ಹೇಳಿಕೆಯಲ್ಲಿ ತಿಳಿಸಲಾಗಿದೆ. ತೆಕ್ಕಡಿಗೆ ತೆರಳುವ ಮಾರ್ಗಮಧ್ಯೆ ಎಲ್ .ಕೆ. ಅಡ್ವಾಣಿ ಅವರು, ತಮ್ಮ ಪುತ್ರಿ ಪ್ರತಿಭಾ ಅಡ್ವಾಣಿ ಅವರೊಂದಿಗೆ ಇಳಿಕಲಂ ರೆಸಾರ್ಟ್ ನಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಂಡರು. ಈಸಂದರ್ಭದಲ್ಲಿ ಅವರನ್ನು ಸ್ಥಳೀಯರು ಆತ್ಮೀಯವಾಗಿ ಸ್ವಾಗತಿಸಿ ಸತ್ಕರಿಸಿದರು.ಸಂಜೆ ಅವರು ತೆಕ್ಕಡಿಗೆ ತೆರಳಿದರು.ಅಡ್ವಾನಿ ಅವರು ಜನವರಿ 13 ಮತ್ತೆ ರೆಸಾರ್ಟ್ ಗೆ ಹಿಂದುರಿಗಿ ಅಲ್ಲಿಂದ ಕೊಚ್ಚಿ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ತೆರಳಲಿದ್ದಾರೆ.