ಲೋಕದರ್ಶನ ವರದಿ
ಕುರುಗೋಡು 10: ಧರ್ಮಗಳ ಮಧ್ಯೆ ಸಂಘರ್ಷ ತಲೆ ದೋರಿದಾಗ ಭಿನ್ನಾಭಿಪ್ರಾಯ ನಿವಾರಿಸಿ ಸಮಾನತೆ ಮೆರೆದ ವೀರಶೈವ ಧರ್ಮ, ವೀರಶೈವ ಮತ್ತು ಲಿಂಗಾಯತರಲ್ಲಿ ಯಾವ ವ್ಯತ್ಯಾಸವಿಲ್ಲ, ಎಲ್ಲಾರೂ ಇಷ್ಟಲಿಂಗ ಧಾರಣೆ ಮಾಡಿ ಪೂಜಿಸುತ್ತಾರೆ ಎಂದು ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಠದ ಶ್ರೀ ಷಬ್ರ. ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಪಟ್ಟಣದ ಮುಷ್ಟಗಟ್ಟೆ ರಸ್ತೆಯಲ್ಲಿ ಬರುವ ಶ್ರೀ ಪಂಚಮುಖಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಸಂಘ ಹಮ್ಮಿಕೊಂಡಿದ್ದ ನೂತನ ತಾಲೂಕು ಘಟಕ ಉದ್ಘಾಟನೆ, ವೀರಶೈವ ಧರ್ಮದ ತತ್ವಗಳ ಉಪನ್ಯಾಸ, 501 ಸಸಿಗಳ ನೆಡುವುದು ಹಾಗೂ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಆರೋಗ್ಯ ಇಲಾಖೆಯ ನಿವೃತ್ತ ಆಡಳಿತ ಎನ್.ಮರೇಗೌಡ ವೀರಶೈವ ಧರ್ಮದ ತತ್ವಗಳ ಕುರಿತು ಉಪನ್ಯಾಸ ನೀಡಿದರು. ಹಾವಿಗೆ ಮಠದ ಷಬ್ರ. ರಾಘವಾಂಕ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ತಹಶೀಲ್ದಾರ್ ಎಂ.ಪದ್ಮಾವತಿ, ರೈತ ಮುಖಂಡ ದರೂರು ಪುರುಷೋತ್ತಮಗೌಡ, ಗಂಗಾವತಿ ಎಂ.ಬಸವರಾಜ ಸ್ವಾಮಿ ಮಾತನಾಡಿದರು. ಸಂಘದ ರಾಜ್ಯಾಧ್ಯಕ್ಷ ಜೆ.ರಾಜಶೇಖರಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ಅಧ್ಯಕ್ಷ ಯೋಗೀಶ್ ಹೂಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮಕ್ಕೆ ಬಂದಿರುವ ಅಥಿತಿಗಳು ಒಂದೊಂದು ಸಸಿಗಳಂತೆ ಒಟ್ಟು 501 ಸಸಿಗಳನ್ನು ನೆಡುವದರ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದರು.
ಸನ್ಮಾನ :
ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆಎಂ.ಉಮಾಪತಿಗೌಡ, ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷೆ ಕೆಎಂ.ನೀಲಗಂಗಮ್ಮ, ಕುಂಬಾರು ದೊಡ್ಡಪ್ಪ ಇವರ ಸೇವೆಯನ್ನು ಗುರಿತಿಸಿ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ರೌಡುಕುಂದ ಸಂಸ್ಥಾಣ ಹಿರೇಮಠದ ಷಬ್ರ. ಮರಿಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ದಾಸರ ನಾಗೇನಹಳ್ಳಿಯ ವೇದಮೂತರ್ಿ ನಂಜುಡೇಶ್ವರ ತಾತಾ, ಕ್ಯಾದಿಗೆಹಾಳ್ ವೇದಮೂತರ್ಿ ಗಂಗಾಧರ ತಾತಾ, ಪಂಚಮುಖಿ ವೀರಭದ್ರೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಕೆಎಂ.ರುದ್ರುಮುನಿಸ್ವಾಮಿ, ಸದಸಿಶಿವಪ್ಪ, ಜಿ.ವಿಜಯಕುಮಾರಗೌಡ, ಎಂ.ಯು.ಪ್ರಭುಗೌಡ, ಲೋಕೇಶ್ ಜೋಳದರಾಶಿ, ಎಸ್.ಎಂ.ಪ್ರಕಾಶಸ್ವಾಮಿ, ವೀರಶೈವ ಸಮಾಜದ ಮುಖಂಡರು ಹಾಗೂ ಸಂಘದ ಪದಾಧಿಕಾರಿಗಳು ಇದ್ದರು. ಶಿಕ್ಷಕ ಸಿಹೆಚ್ಎಂ.ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು.