ಲೋಕದರ್ಶನ ವರದಿ
ಅಥಣಿ 24: ತಾಲೂಕಿನ ಮುರಗುಂಡಿ ಗ್ರಾಮದಲ್ಲಿ ಯಲ್ಲಮ್ಮಾದೇವಿ ಧರ್ಮದತ್ತಿ ಸಂಸ್ಥೆಯ ವತಿಯಿಂದ 24ನೇ ವರ್ಷದ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಯಲ್ಲಮ್ಮದೇವಿ ಮೂತರ್ಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯ ಮೂಲಕ ಕರೆತರಲಾಯಿತು. ದೇವಿಯ ಪಲ್ಲಕ್ಕಿ ಗ್ರಾಮ ಪ್ರದಕ್ಷಿಣೆ ಮಾಡಲಾಯಿತು. ಮೆರವಣಿಗೆಯಲ್ಲಿ ಮುತ್ತೈದೆಯರು ಪೂರ್ಣಕುಂಭದೊಂದಿಗೆ ಭಾಗವಹಿಸಿದ್ದರು. ವಾದ್ಯಗಳು, ಕರಡಿ ಮಜಲು ಮುಂತಾದ ವಾದ್ಯಗಳ ಮೂಲಕ ಮೆರವಣಿಗೆ ಕಣ್ಮನ ಸೆಳೆಯಿತು
ಬೆಳಿಗ್ಗೆ ದೇವರ ಪಲ್ಲಕ್ಕಿಗೆ ಪೂಜೆ, ನೈವೇದ್ಯಗಳೊಂದಿಗೆ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು. ನಂತರ ಮಾವಿನ ತೊಳಲು, ಹೂವು, ಎಲೆ ಹಾಗೂ ಟೆಂಗಿನ ಕಾಯಿಗಳಿಂದ ಸಿಂಗರಿಸಿದ ಪೂರ್ಣಕುಂಭಗಳನ್ನು ಹೊತ್ತುಕೊಂಡ ಮುತ್ತೈದೆಯರ ಮೆರವಣಿಗೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿಶೇಷ ಪೂಜೆ, ಸಾಂಸ್ಕೃತಿಕ ಹಾಗೂ ಧಾಮರ್ಿಕ ಕಾರ್ಯಕ್ರಮಗಳು ನಡೆದವು. ಭಕ್ತಾದಿಗಳೂ ಸಹ ಅಗ್ನಿ ಕುಂಡವನ್ನು ಹಾಯದು ತಮ್ಮ ಹರಕೆ ತೀರಿಸಿಕೊಂಡರು.
ದೇವಸ್ಥಾನದ ಪೂಜಾರಿಗಳಿಂದ ಕಿಚ್ಚು ಹಾಯುವ ಕಾರ್ಯಕ್ರಮ ಜರುಗಿತು. ನಂತರ ಅನ್ನ ಪ್ರಸಾದ ವಿತರಿಸಲಾಯಿತು. ರಾಮದುರ್ಗದ ಸಿದ್ದು ಮೋಟೆ ಇವರಿಂದ ಡೊಳ್ಳಿನ ಜಾನಪದ ಝಲಕ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ಚಿದಾನಂದ ಸವದಿ ಮಾತನಾಡಿ ಇಂತಹ ಜಾತ್ರಾ ಮಹೋತ್ಸವಗಳು ಜನರಲ್ಲಿ ಸದ್ಭಾವನೆ ಮೂಡಿಸುವುದರೊಂದಿಗೆ ಒಟ್ಟಾಗಿ ಕಾರ್ಯಕ್ರಮಗಳನ್ನು ಮಾಡಿ ಒಗ್ಗಟ್ಟಾಗಿ ಇರುವಂತಹ ಮಾನಸಿಕತೆಯನ್ನು ಬೆಳೆಸುತ್ತವೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು