ಕುಮಠಳ್ಳಿಗೆ ಸಚಿವ ಸ್ಥಾನ ಪಕ್ಕಾ: ನಳೀನ ಕುಮಾರ

ಲೋಕದರ್ಶನ ವರದಿ

ಅಥಣಿ (ಶಿವಪುತ್ರ ಯಾದವಾಡ): ಸದ್ಯ ಬಿಜೆಪಿ ಸರಕಾರ ನಡೆಯಲು, ರಾಜೀನಾಮೆ ನೀಡಿದ ಶಾಸಕರ ಕೃಪೆಯಿಂದ ರಚನೆಯಾಗಿದೆ. ಮಹೇಶ ಕುಮಠಳ್ಳಿ ಇವರನ್ನು ಆಯ್ಕೆ ಮಾಡುವುದರಿಂದ ಕ್ಷೇತ್ರದ ಸಮಗ್ರ ಅಭೀವೃದ್ದಿಯಾಗುತ್ತದೆ. 

ಅಲ್ಲದೆ ಮುಂದಿನ ದಿನಗಳಲ್ಲಿ ನಮ್ಮ ಬಿಜೆಪಿ ಸರಕಾರದಲ್ಲಿ  ಸಚಿವ ಸ್ಥಾನ ಲಭಿಸುವುದು. ಸತ ಸಿದ್ಧ ಎಂದು ಭಾರತೀಯ ಜನತಾಪಕ್ಷದ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲರವರು ಹೇಳಿದರು.

ಮಂಗಳವಾರ ಮುಂಜಾನೆ ಬಿಜೆಪಿಯ ಬೃಹತ ರ್ಯಾಲಿಗೆ ಚಾಲನೆ ನೀಡಿ  ಮಾತನಾಡಿದರು. ಉಪಮುಖ್ಯ ಮಂತ್ರಿ ಲಕ್ಷ್ಮಣ ಸವದಿಯವರು ಮಾತನಾಡುತ್ತಾ, ಮಹೇಶ ಕುಮಠಳ್ಳಿಯವನ್ನು ಆರಿಸಿ ತರುವುದರಿಂದ ಪಕ್ಷಕ್ಕೂ ಕ್ಷೇತ್ರಕ್ಕೂ ಲಾಭವಾಗಲಿದೆ ಎಂದರು. ಇನ್ನೊರ್ವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡುತ್ತಾ ಅಥಣಿ ತಾಲೂಕಿಗೆ ಮತ್ತು ಕಾಗವಾಡದೊಂದಿಗೆ ಮೂರು ಮಂತ್ರಿಗಳ ಸ್ಥಾನ ಲಭೀಸಲಿದೆ. 

ಒಂದು ಉಪ ಮುಖ್ಯ ಮಂತ್ರಿ, ಇದರೊಂದಿಗೆ ಎರಡು ಮಂತ್ರಿಗಳ ಸ್ಥಾನ ದೊರೆಯಲಿದೆ. ಹೀಗಾಗಿ ಅಭಿವೃದ್ದಿಗೆ ಬಹಳ ಬಹಳ ಅನೂಕುಲವಾಗುವುದೆಂದರು.  

ಬಳಿಕ ಬಿಜೆಪಿಯ ಕಛೇರಿಯಿಂದ ಬೃಹತ ಮೆರವಣಿಗೆಯೂ ಪ್ರಾರಂಭವಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಈ ರ್ಯಾಲಿಯೂ ನಡೆಯಿತು. ದಾರಿಯಲ್ಲಿ ಈ ಎಲ್ಲ ಮುಖಂಡರಿಗೆ ಜನರು, ಅಭಿಮಾನಿಗಳು ಪುಷ್ಪವೃಷ್ಟಿ ಮಾಡಿ ಹೂ ಮಾಲೆ ಹಾಕಿ ಸ್ವಾಗತಿಸಿದರು. 

ಮೆರವಣಿಗೆ ಸಾಗುತ್ತಿದ್ದಂತೆ ಡೋಳ್ಳು, ಕರಡಿ, ಮುಂತಾದ ವಾದ್ಯಗಳು ಮತ್ತು ಅಸಂಖ್ಯ ಜನರ ಜಯಘೋಷಣೆಯಿಂದ ರ್ಯಾಲಿಗೆ ಶೋಭೆ ತಂದಿತ್ತು. ನೂರಾರು ಮಹಿಳೆಯರು ಬಿಜೆಪಿ ಧ್ವಜವನ್ನು ಹಿಡಿದುದ್ದರಿಂದ ಮತ್ತಷ್ಟು ಮೆರಗು ತಂದಿತ್ತು. 

ರ್ಯಾಲಿಯಲ್ಲಿ ಬೀದರ ಲೋಕಸಭಾ ಸದಸ್ಯರಾದ ಭಗವಂತ ಖೋಬಾ, ಅಭ್ಯಥರ್ಿ ಮಹೇಶ ಕುಮಠಳ್ಳಿ, ಶಶಿಕಾಂತ ನಾಯಿಕ, ಜಮಖಮಡಿ ಮಾಜಿ ಶಾಸಕ ಶ್ರಿಕಾಂತ ಕುಲಕಣರ್ಿ, ಉಮೇಶ ಬೊಂಟಡಕರ, ಮಲ್ಲು ಹುದ್ದಾರ, ರಾಜು ಚೌಗಲಾ, ಸಿದ್ದು ಪಾಟೀಲ, ಅನೀಲ ಸೌದಾಗರ, ಶಶಿ ಸಾಳವೆ, ಅನಿಲ ಭಜಂತ್ರಿ, ಭೂಜೆಂದ್ರ ಕಾಳೆ, ಗೀತಾ ತೋರಿ, ಪ್ರಭಾಕರ ಚೌಹಾನ, ಡಾ. ಕುಮಠಳ್ಳಿ, ಹಾಗೂ ಬಿಜೆಪಿಯ ಪ್ರಧಾನ ಮುಖಂಡರು, ಕಾರ್ಯಕರ್ತರು, ಮಹಿಳೆಯರಾದಿಯಾಗಿ ಸಹಸ್ರರಾರು ಜನರು ರ್ಯಾಲಿಯಲ್ಲಿ ಪಾಲಗೊಂಡಿದ್ದರು.  ಈ ಸಮಯದಲ್ಲಿ ಅಪ್ಪಾಸಾಬ ಅವತಾಡೆ ಮಾತನಾಡುತ್ತ ಇತ್ತಿಚಿನ ದಿನಗಳಲ್ಲಿ ಇಂದಿನ ರ್ಯಾಲಿ ಅಭೂತಪೂರ್ವವಾಗಿತ್ತು ಎಂದರು. ಇದೇ ರೀತಿ ರ್ಯಾಲಿ ಅಥಣಿ ವಿಧಾನ ಸಭಾ ಕ್ಷೇತ್ರದಲ್ಲಿ ಸುತ್ತಾಡಿ ಬಿಜೆಪಿ ಅಭ್ಯಥರ್ಿ ಮಹೇಶ  ಕುಮಠಳ್ಳಿಯವರ ಪರವಾಗಿ ಪ್ರಚಾರ ಮಾಡಿದರು.