ರಾಮನಗರ, ಏ.6, ರಾಮನಗರದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜೆಡಿಎಸ್ ವತಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತಕ್ಷೇತ್ರ ಚನ್ನಪಟ್ಟಣ ಹಾಗೂ ಅನಿತಾ ಕುಮಾರಸ್ವಾಮಿ ಕ್ಷೇತ್ರ ರಾಮನಗರದಲ್ಲಿ ಸ್ಯಾನಿಟೈಸಡ್ ಟನಲ್ ಗಳನ್ನು ಆರಂಭಿಸಲಾಗಿದ್ದು, ಟನಲ್ಗಳಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಉದ್ಘಾಟನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಸಾರ್ವಜನಿಕ ಹೆಚ್ಚು ಓಡಾಡುವ ಸ್ಥಳದಲ್ಲಿ ತಮಿಳುನಾಡಿನ ಜಿಲ್ಲಾಧಿಕಾರಿಯೊಬ್ಬರು ಸ್ಯಾನಿಟೈಸರ್ ಟನಲ್ ಮಾಡುವ ಮೂಲಕ ರೋಗವನ್ನು ತಾತ್ಕಾಲಿಕವಾಗಿ ತಡೆಯಲು ಶುರು ಮಾಡಿದ್ದರು. ಇಂತಹ ಟನಲ್ ಅನ್ನು ಜೆಡಿಎಸ್ ವತಿಯಿಂದ ರಾಮನಗರದಲ್ಲಿ ಪ್ರಾರಂಭಿಸಲಾಗಿದೆ ಎಂದರು.
ಚನ್ನಪಟ್ಟಣ, ರಾಮನಗರ ಎರಡು ಕಡೆ ಐದು ಸ್ಥಳದಲ್ಲಿ ಟನಲ್ ಗಳನ್ನು ರೈತರ ಉಪಯೋಗಕ್ಕಾಗಿ ಮಾಡಲಾಗಿದೆ. ಹಳ್ಳಿಯಿಂದ ಬರುವ ರೈತರಿಗೆ ಸೋಂಕು ತಡೆಯುವಂತಹ ಸಣ್ಣ ಕಾರ್ಯವನ್ನು ಪ್ರಾರಂಭ ಮಾಡಿದ್ದೇವೆ. ಎಲ್ಲಾ ಕಡೆ ಈ ರೀತಿ ಟನಲ್ ಗಳನ್ನು ಸ್ಥಾಪನೆ ಮಾಡಬೇಕು ಎಂದರು. ಸರ್ಕಾರದ ವಿರುದ್ಧ ಟೀಕೆ ಮಾಡುವ ಸಮಯ ಇದಲ್ಲ. ಸರ್ಕಾರ ಸರಿಯಾದ ರೀತಿ ಕೆಲಸ ಮಾಡಬೇಕು ಎಂದು ಸಲಹೆ ಕೊಡುತ್ತೇವೆ. ಈ ಸಮಯಕ್ಕೆ ಸೇವೆ ಮಾಡುತ್ತಿರುವ ವೈದ್ಯಕೀಯ ಇಲಾಖೆಗೆ ಅಗತ್ಯ ವಸ್ತುಗಳನ್ನು ಕೊಡಲು ಹೇಳುತ್ತೇನೆ. ಪಿಪಿಇ ಸೆಟ್ ಹಾಗೂ ಕಿಟ್ ಗಳನ್ನು ತಕ್ಷಣ ತರುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು. ಕೊರೋನಾ ಪರಿಣಾಮದ ನಡುವೆಯೂ ಜೆಡಿಎಸ್ ಯುವ ಘಟಕ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ಪುತ್ರ ನಿಖಿಲ್ ಮದುವೆ ನಡೆಯಲಿದೆ. ಏ.17ರಂದು ಸರಳವಾಗಿ ಮನೆ ಸದಸ್ಯರ ಸಮ್ಮುಖದಲ್ಲಿ ವಿವಾಹ ನೆರವೇರಿಸಲಾಗುವುದು. 17 ರ ಶುಭ ಲಗ್ನದಲ್ಲೆ ನಿಖಿಲ್ ಮದುವೆ ನಡೆಯಲಿದೆ.ಮುಂದೆ ಸಮಯ ನೋಡಿ ರಾಮನಗರದಲ್ಲಿ ಕಾರ್ಯಕ್ರಮ ಮಾಡಲಾಗುವುದು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.