ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ವಿತರಣೆ

ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ವಿತರಣೆ Distribution of nutritious food to students under the Akshara Dasoha scheme

ರಾಯಬಾಗ 11 :  ಮಕ್ಕಳಲ್ಲಿ ಪೌಷ್ಟಿಕ ಮತ್ತು ಉತ್ತರ ಆಹಾರ ಪದ್ಧತಿಯನ್ನು ಬೆಳೆಸುವುದು ಹಾಗೂ ಆರೋಗ್ಯದಾಯಕ ಬೆಳವಣಿಗೆಗೆ ಪೂರಕವಾಗುವುದು ಅಕ್ಷರ ದಾಸೋಹ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಆದರ್ಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಈರಗೌಡ ಪಾಟೀಲ ಹೇಳಿದರು. ಶನಿವಾರ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಹೊಸ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಬಾಜೀರಾವ ಮಗದುಮ್ಮ ಪ್ರೌಢ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಇಡ್ಲಿ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಗಮನದಲ್ಲಿಟ್ಟುಕೊಂಡು ಶಾಲೆಯಲ್ಲಿ ಇಡ್ಲಿ ವಿತರಿಸಲಾಗುತ್ತಿದೆ ಎಂದರು. ಸಂಸ್ಥೆ ಕಾರ್ಯದರ್ಶಿ ಎ.ಟಿ.ಕೂಗೆ, ಸದಸ್ಯರಾದ ಧುಳಗೌಡ ಪಾಟೀಲ, ಅಜೀತ ಕಾಮಗೌಡ, ಅರಿಹಂತ ಕಾಮಗೌಡ, ಕುಮಾರ ಕಾಮಗೌಡ, ಸಿ.ಆರಿ​‍್ಪ ಮುಬಾರಕ ತಾಶೀವಾಲೆ, ಮುಖ್ಯೋಪಾಧ್ಯಾಯ ಅರುಣ ಸಲಗರೆ, ಎಸ್‌.ಬಿ.ಬೆನ್ನಾಡೆ, ಕುಂತಿನಾಥ ಮಗದುಮ್ಮ, ರಮೇಶ ಬೆಳಗಲಿ, ಪ್ರಕಾಶ ಬೊಳಗೊಂಡ, ಅಜೀತ ಅರಗೆ, ಅಣ್ಣಾಸಾಹೇಬ ಪಾಟೀಲ ಹಾಗೂ ಆದರ್ಶ ಗ್ರೂಪನ ಸದಸ್ಯರು ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.