ರಾಣೇಬೆನ್ನೂರು 07: ತಾಲೂಕಿನ ಕುಮಾರಪಟ್ಟಣದಲ್ಲಿ ಭವ್ಯವಾಗಿ ನಿರ್ಮಾಣವಾಗಿರುವ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ಪುತ್ತಳಿಯ ಲೋಕಾರೆ್ಣ, ಧಾರ್ಮಿಕ ಕಾರ್ಯಕ್ರಮವು ಮಾರ್ಚ್ 16, 2025 ರಂದು ನಡೆಯಲಿದೆ.
ನಡೆಯಲಿರುವ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರುಗಳನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಮುಖಂಡರು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿ ಆತ್ಮೀಯವಾಗಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಗುರುಪೀಠದ ಜಗದ್ಗುರುಶ್ರೀ ಡಾಽಽವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು, ಹಾವೇರಿ ಜಿಲ್ಲಾ ಧರ್ಮದರ್ಶಿ ನಾಗರಾಜಪ್ಪ ಹಳ್ಳೆಳ್ಳಪ್ಪನವರ, ತಾಲೂಕು ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಚಂದ್ರ್ಪ ಬೇಡರ ಹಾಗೂ ನಲವಾಗಲ, ಕೊಡಿಯಾಲ ಕವಲೆತ್ತು ಗ್ರಾಮಗಳ ಹಿರಿಯರು ಮತ್ತು ಯುವಕರು ಪಾಲ್ಗೊಂಡಿದ್ದರು.