ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜೊತೆ ಒಪ್ಪಂದವಿಲ್ಲ ಪಾಕ್ ಸ್ಪಷ್ಟಣೆ

ಇಸ್ಲಾಮಾಬಾದ್,  15 :     ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ  ಕುಲಭೂಷಣ್  ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಯಾವುದೇ ಒಪ್ಪಂದ  ಮಾಡಿಕೊಂಡಿಲ್ಲಎಂದು ಪಾಕಿಸ್ತಾನ  ಸ್ಪಷ್ಟಪಡಿಸಿದೆ.   ಐಸಿಜೆ ನೀಡಿರುವ ತೀರ್ಪುನ ಜಾರಿ ಕುರಿತು ಪಾಕ್ ಸಂವಿಧಾನದ  ನಿಯಮಾವಳಿಗಳ ಪ್ರಕಾರವೇ   ತೀರ್ಮಾನ ತೆಗೆದುಕೊಳ್ಳಲಾಗುವುದು ಹೇಳಿದೆ.   ಜಾಧವ್ ಪ್ರಕರಣ ಮರುಪರಿಶೀಲನೆ ಮಾಡಲು ಪಾಕಿಸ್ತಾನ ಕಾನೂನಿನ ಬೇರೆ ಬೇರೆ ಅವಕಾಶ ಆಯ್ಕೆಗಳನ್ನು ಪರಶೀಲಿಸಲಾಗುತ್ತಿದೆ  ಎಂದೂ   ಸೇನೆ ಈ ಮೊದಲು ಹೇಳಿತ್ತು. ಈ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿರುವ ಪ್ರಕರಣದಲ್ಲಿ ಭಾರತದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲಎಂದು ಹೇಳಿದೆ .   ಸಂವಿಧಾನದ ಪ್ರಕಾರ ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ನಿರ್ದೇಶನಗಳನ್ನು ಜಾರಿಗೊಳಿಸಲಾಗುವುದು ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ ಜಾಧವ್ ಅವರಿಗೆ 2017ರ ಏಪ್ರಿಲ್ 10ರಂದು ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು.