ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಶಾಲೆಗೆ ಕೀತರ್ಿ ತನ್ನಿ: ಶೋಭಾ

ಲೋಕದರ್ಶನವರದಿ

ಬ್ಯಾಡಗಿ30: ಬರುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಶಾಲೆ ಹಾಗೂ ತಾಲೂಕಿಗೆ ಒಳ್ಳೆಯ ಕೀತರ್ಿ ತನ್ನಿ ಎಂದು ಡಾ.ಬಿ.ಆರ್.ಅಂಬೇಡ್ಕರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ನೋಟದ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ಆಂಗ್ಲ ಮಾದ್ಯಮ ಪ್ರೌಢ ಶಾಲೆಯಲ್ಲಿಜರುಗಿದ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾಥರ್ಿಗಳ ಪೋಷಕರ ಸಭೆ, ತಾಯಂದಿರ ಪಾದ ಪೂಜೆ ಹಾಗೂ ಧೈರ್ಯ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದಅವರು, ಪರೀಕ್ಷೆಯ ಆತಂಕ ನಿವಾರಣೆ ಉದ್ದೇಶದಿಂದ ಈ ಒಂದು ಕಾರ್ಯಕ್ರಮ ಹಾಕಿಕೊಂಡಿದ್ದು, ಅನಗತ್ಯ ವಿಷಯಗಳ ಬಗ್ಗೆ ಗಮನ ಹರಿಸಬೇಡಿ, ಚಿತ್ತಚಾಂಚಲ್ಯಕ್ಕೆ ಒಳಗಾಗದೆ ಗುರಿಯನ್ನು ಕೇಂದ್ರೀಕರಿಸಿ ನಿರಾಂತಕವಾಗಿ ಅಂತಿಮ ಕ್ಷಣದ ಸಿದ್ಧತೆ ಮಾಡಿಕೊಳ್ಳಿ ಎಂದರು.

   ಎಸ್ಡಿಎಂಸಿ ಅಧ್ಯಕ್ಷ ವಿರೇಂದ್ರ ಶೆಟ್ಟರ ಮಾತನಾಡಿ, ಶಾಲೆಯಲ್ಲಿ ಭೋಧಿಸಿದ ಪಾಠವನ್ನು ದಿನನಿತ್ಯ ಮನೆಯಲ್ಲಿ ಅಭ್ಯಾಸ ಮಾಡುವದರಿಂದ ಹೆಚ್ಚಿನ ಅಂಕ ಪಡೆಯಲು ಸಾಧ್ಯ.ಕಠಿಣ ವಿಷಯವನ್ನು ಬೆಳಗಿನ ಜಾವದಲ್ಲಿ ಓದುವದು ಒಳ್ಳೆಯದು. ನಿವಾರಣೆಯಾಗದ ವಿಷಯಗಳನ್ನು ಶಿಕ್ಷಕರಲ್ಲಿ ಹಾಗು ಪೋಷಕರೊಂದಿಗೆ ಚಚರ್ಿಸಿ ಆತಂಕ ನಿವಾರಣೆ ಮಾಡಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಶಾಂತಾತಂಬ್ಳೆರ, ರೇಖಾ ಮಠದ, ರೇವತಿ, ಮಂಜುಳಾ ಸೋಮನಕಟ್ಟಿ, ಕುಸುಮಾ ಟಿ, ವಿಜಯಲಕ್ಷ್ಮಿಅಂಗಡಿ, ಶೋಬಾ ಅಂಜಗಿ, ಶಿಕ್ಷಕರಾದ ಮಂಜುನಾಥ ಬಿ, ಮಲ್ಲಿಕಾಜರ್ುನ ಕೆ, ಪಮೀದಾ ಭಾನುಅತ್ತಾರ, ಪ್ರೇಮಾ ಜಿ ಸೇರಿದಂತೆ ಇನ್ನಿತರರಿದ್ದರು.