ನೂತನ ತಹಶೀಲ್ದಾರ್ ಗುಂಡಪ್ಪಗೋಳಗೆ ಸನ್ಮಾನ
ಯರಗಟ್ಟಿ 04: ತಾಲೂಕಿನ ನೂತನ ತಹಶೀಲ್ದಾರ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ತಹಶೀಲ್ದಾರ ಎಂ. ವ್ಹಿ.ಗುಂಡಪ್ಪಗೋಳ ಅವರಿಗೆ ಶಿಕ್ಷಣ ಇಲಾಖೆಯ ಪರವಾಗಿ ಗೌರವ ಸನ್ಮಾನ ಜರುಗಿಸಲಾಯಿತು. ನಲಿ ಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಮನೋಹರ ಚೀಲದ, ಸಮನ್ವಯ ಶಿಕ್ಷಣ ಶಿಕ್ಷಕರಾದ ವೈ ಬಿ ಕಡಕೋಳ, ಮುರಗೋಡ ವಲಯದ ಸಮನ್ವಯ ಶಿಕ್ಷಣ ಶಿಕ್ಷಕ ದುರಗಪ್ಪ ಭಜಂತ್ರಿ, ಬಸವರಾಜ ಹೂಗಾರ ಉಪಸ್ಥಿತರಿದ್ದರು.