ಬೈಲಹೊಂಗಲ, 15- ಪಟ್ಟಣದ ಹೊಸೂರ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜು ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ 2017-18 ನೇಸಾಲಿನಲ್ಲಿ ಜರುಗಿದ ಕನ್ನಡ ಎಂ.ಎ. ವಿಭಾಗದ ಪರೀಕ್ಷೆಯಲ್ಲಿ ವಿದ್ಯಾಥರ್ಿನಿ ಕು. ನೇತ್ರಾ ಯರಗಟ್ಟಿ ಇವಳು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ 5ನೇ ರ್ಯಾಂಕ್ ಪಡೆದು ಕೀತರ್ಿ ತಂದ ವಿದ್ಯಾಥರ್ಿನಿಯ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿ ಚೇರಮನ್ನರು ಹಾಗೂ ಸರ್ವ ಸದಸ್ಯರು, ಪ್ರಾಚಾರ್ಯ ಆರ್.ಎಸ್. ಮರಿಗೌಡರ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ವಿದ್ಯಾಥರ್ಿನಿಯನ್ನು ಅಭಿನಂದಿಸಿದ್ದಾರೆ.