ಕೊಪ್ಪಳ ಬಂದ್ ಕರೆಗೆ ಕ್ಷತ್ರಿಯ ಮರಾಠ ಪರಿಷತ್ ಬೆಂಬಲ: ಜಾಧವ
ಕೊಪ್ಪಳ 22: ಕೊಪ್ಪಳದಲ್ಲಿ ದಿ 24 ರಂದುಪರಿಸರ ಹಿತ ಕಾಪಾಡಲುಕೊಪ್ಪಳ ಬಂದ್ ಗೆ , ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ (ರಿ) ಜಿಲ್ಲಾ ಘಟಕ ಕೊಪ್ಪಳ, ಇವರ ಸಂಪೂರ್ಣ ಬೆಂಬಲ ಇದೆ ಎಂದು ಸಮಾಜದ ಮುಖಂಡ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕಳಕಪ್ಪ ಜಾದವ್ ಘೋಷಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಆವರುಕೊಪ್ಪಳ ನಗರಕ್ಕೆ ಹೊಂದಿಕೊಂಡೇ ಅತಿ ಹತ್ತಿರವಾದ ಜಾಗದಲ್ಲಿ (ಬಿ.ಎಸ್.ಪಿ.ಎಲ್) ಬೃಹತ್ ಉಕ್ಕಿನ ಕಾರ್ಖಾನೆ ಪ್ರಾರಂಭವಾಗುತ್ತಿದ್ದು, ಮುಂದಿನ ದಿನಮಾನಗಳಲ್ಲಿ ಕೊಪ್ಪಳ ನಗರ ಹಾಗೂ ಸುತ್ತ, ಮುತ್ತ, ಇರುವ ಗ್ರಾಮ ಹಾಗೂ ಪಟ್ಟಣಗಳು ರೋಗ ಗ್ರಸ್ಥವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾರಣ ಸದರಿ ಕಂಪನಿ ವಿರುದ್ಧ ಬೃಹತ್ ಪ್ರತಿಭಟನೆ ಮಾಡುವ ಮೂಲಕ ನಮ್ಮ ನೆಲ-ಜಲದ ಉಳಿವಿಗಾಗಿ, ಮುಂದಿನ ಪೀಳಿಗೆಗೆ ಆರೋಗ್ಯಕರ ವಾತಾವರಣ ಉಳಿಸಲು ಕೊಪ್ಪಳ ಬಂದ್ ಕರೆ ನೀಡಿದ್ದು ಸಮಯೋಚಿತವಾಗಿದೆ.
ಕಾರಣ ಕೊಪ್ಪಳದ ಭವಿಷ್ಯಕ್ಕಾಗಿ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಸೋಮವಾರದಂದು ಕರೆ ನೀಡಿರುವ ಕೊಪ್ಪಳ ಬಂದ್ ಗೆ ನಮ್ಮ ಕೊಪ್ಪಳ ಜಿಲ್ಲಾ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ (ರಿ) ಜಿಲ್ಲಾ ಘಟಕ ಕೊಪ್ಪಳ ಸಂಪೂರ್ಣ ಬೆಂಬಲ ನೀಡಲಾಗುವುದು. ಹಾಗೂ ಇದರ ಯಶಸ್ವಿಗೆ ನಿರಂತರವಾಗಿ ಜೊತೆ ಇರುವುದಾಗಿ ಈ ಮೂಲಕ ತಿಳಿಸುತ್ತಿದ್ದೇವೆ.ಕೆ.ಕೆ.ಎಂ.ಪಿ. ಜಿಲ್ಲಾ ಅಧ್ಯರಾದ ಕಳಕಪ್ಪ ಜಾದವ್, ಕಿಷ್ಟಪ್ಪ ಬಂಕದ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಂಗಳೂರ, ಸುಭಾಸ್ ಅಡ್ಯಾಳ, ನಾಗರಾಜ ಅಡ್ಯಾಳ, ಡಾ!!ನಾಗರಾಜ, ವಸಂತ ಲೊಂಡೆ, ತಾನಾಜಿ ಮರಾಠ, ಗೂರ್ಪ ಬೂದಗುಂಪಿ, ಬಸವರಾಜ ಮರಾಠಿ, ಕೆ.ಕೆ.ಎಂ.ಪಿ. ಕ್ಷತ್ರೀಯ ಮರಾಠ ಬಂಧುಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.