ಲೋಕದರ್ಶನ ವರದಿ
ಕೊಪ್ಪಳ 26: ಇತ್ತೀಚಿಗೆ ಭಾಗ್ಯನಗರದ ಜ್ಞಾನ ಭಾರತಿ ಸ್ಕೂಲ್ನಲ್ಲಿ ಕೃಷ್ಣ ಗೋಕುಲಾಷ್ಟಮಿ ಪ್ರಯುಕ್ತ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳು, ಪಾಲಕರು ಪಾಲ್ಗೊಂಡಿದ್ದರು, ಶಾಲೆಯ ಅಧ್ಯಕ್ಷ ಸುರೇಶ ಡೊಣ್ಣಿ, ಶರಣಪ್ಪ ನಾಯಕ, ಪರಶುರಾಮ ನಾಯಕ, ಸುಭಾಷ ಕೆಂಭಾವಿ, ಹಾಗೂ ಶಾಲಾ ಮುಖ್ಯೋಪಾದ್ಯಾಯರು, ಶಿಕ್ಷಕಿಯರು, ಶಾಲಾ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.