ಧಾರವಾಡ 5: ಹಿಂದೂಸ್ಥಾನ ಯುನಿವಸರ್ಿಟಿ ಚೆನ್ನೈನಲ್ಲಿ 19 ಡಿಸೆಂಬರ್ 2019 ರಿಂದ 23 ಡಿಸೆಂಬರ್ 2019 ರವರೆಗೆ ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಟೇಬಲ್ ಟೆನ್ನಿಸ್ ಚಾಂಪಿಯನ್ ಶಿಪ್ನಲ್ಲಿ ಜೆ.ಎಸ್.ಎಸ್ ಕಾಲೇಜಿನಲ್ಲಿ ಓದುತ್ತಿರುವ ಕೃಷ್ಣ. ಸಿ. ಭಾಗವಹಿಸಿ ಖೇಲೋ ಇಂಡಿಯಾಗೆ ಆಯ್ಕೆಯಾಗಿದ್ದಾನೆ. ಹಾಗೂ ಆದಿ ಕವಿ ನನ್ನಯ್ಯ ವಿಶ್ವವಿದ್ಯಾಲಯ ರಾಜ ಮುಂಡ್ರಿ ಆಂಧ್ರಪ್ರದೇಶದಲ್ಲಿ ನಡೆದ ಇಂಟರ್ ಯುನಿವಸರ್ಿಟಿ ರೋಪ ಸ್ಕೀಪಿಂಗ್ ಚಾಂಪಿಯನ್ಶಿಪ್ನಲ್ಲಿ ಜೆ.ಎಸ್.ಎಸ್ ಪದವಿ ಕಾಲೇಜಿನ ಆಕಾಶ ಬಿ. ಜೋಗರೆಡ್ಡಿ, ಕಂಚಿನ ಪದಕ ಪಡೆದಿದ್ದಾನೆ. ಭೀಮಸೇನ್. ಎಚ್. ಪರಸಾಪುರ ಅವರು ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಎಲ್ಲ ಸಾಧನೆಗೈದ ವಿದ್ಯಾಥರ್ಿಗಳನ್ನು ಜೆ.ಎಸ್.ಎಸ್ ನ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ, ಪ್ರಾಚಾರ್ಯ ಡಾ. ಜಿ.ಕೃಷ್ಣಮೂತಿ, ಕ್ರೀಡಾ ನಿದರ್ೇಶಕ ಜೀನೇಂದ್ರ ಕುಂದಗೋಳ ಹಾಗೂ ಶ್ರವಣ ಯೋಗಿ ಅಭಿನಂದಿಸಿದ್ದಾರೆ.