ಲೋಕದರ್ಶನ ವರದಿ
ಬಳ್ಳಾರಿ17: ಕನರ್ಾಟಕ ಪ್ರದೇಶ ಯುವ ಕುರುಬರ ಸಂಘ(ರಿ)ದ ವತಿಯಿಂದ "ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ 221ನೇಯ ಜಯಂತೋತ್ಸವ" ಯನ್ನು ಸಂಘದ ಕಛೇರಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕನರ್ಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿ.ಎಂ. ಪಾಟೀಲ್ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಹೋರಾಟದ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಧೀಮಂತ ನಾಯಕರಾಗಿ ಇಂದಿಗೂ ಪ್ರತಿಯೊಬ್ಬರ ಮನಸ್ಸಿನಲ್ಲಿದ್ದಾರೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಬಂಡಿಹಟ್ಟಿ ಕೆ.ಎನ್.ಮಂಜುನಾಥರವರು ನಿರ್ವಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಕೊಳಗಲ್ಲು ಅಂಜಿನಿ, ರಾಜ್ಯ ಸಂಘಟನಾ ಕಾರ್ಯದಶರ್ಿ, ಕೆ.ರಾಘವೇಂದ್ರ, ಬಳ್ಳಾರಿ ತಾಲೂಕು ಪ್ರಧಾನ ಕಾರ್ಯದಶರ್ಿ ಎಂ.ಜಿ. ಕನಕ, ತಾಲೂಕು ಸಂಘಟನಾ ಕಾರ್ಯದಶರ್ಿ ಅಮರಾಪುರ ಮಂಜುನಾಥ, ಸಂಗನಕಲ್ಲು ಲಿಂಗಣ್ಣ, ಎತ್ತಿನಬೂದಿಹಾಳು ಸೂರ್ಯದೇವ, ಕ್ರೇಜಿ ಚಂದ್ರ, ಆನಂದ್, ಈಶ್ವರ್, ಮುಂತಾದವರು ಉಪಸ್ಥಿತರಿದ್ದರು.