ರಾಜ್ಯದಲ್ಲಿ ಕೋವಿಡ್-19: ಒಂದೇ ದಿನ 12 ಹೊಸ ಪ್ರಕರಣ: ಸೋಂಕಿತರ ಸಂಖ್ಯೆ 175ಕ್ಕೇರಿಕೆ
ಬೆಂಗಳೂರು, ಏ.7, ಕೋವಿಡ್ 19 ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಹೊಸ 12 ಸೋಂಕಿನ ಪ್ರಕರಣಗಳು ಕಂಡುಬಂದಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 175ಕ್ಕೇರಿಕೆಯಾಗಿದೆ.ಇದುವರೆಗೆ 25 ಮಂದಿ ಗುಣಮುಖರಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.
164ನೆ ಸೋಂಕಿತ ಬಾಗಲಕೋಟೆಯ ಮುಧೋಳ ತಾಲೂಕಿನ 33 ವರ್ಷದ ಯುವಕನಾಗಿದ್ದು, ಈತ ದೆಹಲಿಯಲ್ಲಿ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಪಾಲ್ಗೊಂಡಿದ್ದ. ಈತನನ್ನು ಬಾಗಲಕೋಟೆ ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿ ಇಡಲಾಗಿದೆ.165ನೇ ಸೋಂಕಿತ ಬಾಕಲಕೋಟೆಯವನಾಗಿದ್ದು, ಸೋಂಕಿತ 125ನೇ ನೆರೆಹೊರೆಯವನಾಗಿದ್ದಾನೆ. ಈತನನ್ನು ಅದೇ ಆಸ್ಪತ್ರೆಯಲ್ಲಿ ಇರಿಸಲಾಗಿದೆ. 166ನೇ ಸೋಂಕಿತ ಗದಗದ 80 ವರ್ಷ ಪ್ರಾಯದ ವೃದ್ಧೆಯಾಗಿದ್ದು, ಹಿಂದಿನಿಂದಲೂ ಉಸಿರಾಟದ ಸಮಸ್ಯೆ ಇರುವವರಾಗಿದ್ದಾರೆ. ಅವರನ್ನು ಗದಗ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
167ನೇ ಸೋಂಕಿತ 29 ವರ್ಷದ ಬೆಂಗಳೂರಿನ ನಿವಾಸಿಯಾಗಿದ್ದು, ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಾಗಿದ್ದಾರೆ. 168,169ನೇ ಸೋಂಕಿತರು ಕೂಡ ಬೆಂಗಳೂರು ನಿವಾಸಿಯಾಗಿದ್ದು, 50 ವರ್ಷ ಪ್ರಾಯದ ಪುರುಷ ರೋಗಿಯಾಗಿದ್ದಾರೆ. ಇವರು ಕೂಡ ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಾಗಿದ್ದಾರೆ.
170ನೇ ಸೋಂಕಿತ 68 ವರ್ಷ ಪ್ರಾಯದ ಬೆಂಗಳೂರು ನಿವಾಸಿಯಾಗಿದ್ದು, ಅವರು ದುಬೈಯಿಂದ ಹಿಂದಿರುಗಿದ ಪ್ರವಾಸ ಇತಿಹಾಸ ಹೊಂದಿದ್ದಾರೆ. 171, 172, 173 ನೇ ಸೋಂಕಿತರು ಮಂಡ್ಯದ ಕ್ರಮವಾಗಿ 32 ಮತ್ತು 36, 65 ವರ್ಷಗಳ ಪುರುಷ ವ್ಯಕ್ತಿಗಳಾಗಿದ್ದು, ಇವರು ರೋಗಿ 134, 135, 136, 137, 138ನೇ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದರು. ಅವರನ್ನು ಕೂಡ ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. 174ನೇ ಸೋಂಕಿತೆ ಕಲಬುರ್ಗಿಯ 28 ವರ್ಷ ಪ್ರಾಯದ ಮಹಿಳೆಯಾಗಿದ್ದು, 124ನೇ ರೋಗಿಯ ಸೊಸೆ. ಇವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತ175, ಕಲಬುರಗಿಯ 57 ವರ್ಷ ಪ್ರಾಯದ ಪುರುಷ ವ್ಯಕ್ತವಾಗಿದ್ದು, ಇವರು ಕೂಡ ಉಸಿರಾಟದ ಸಮಸ್ಯೆ ಹೊಂದಿದವರಾಗಿದ್ದಾರೆ. ಇವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 