ಗೌರಿಬಿದನೂರಿನಲ್ಲಿ ಮೃತಪಟ್ಟ ವೃದ್ಧೆಯಲ್ಲಿ ಸೋಂಕು ದೃಢ: ಕೋವಿಡ್‌-19ಕ್ಕೆ ಮೃತಪಟ್ಟವರ ಸಂಖ್ಯೆ ರಾಜ್ಯದಲ್ಲಿ 2ಕ್ಕೇರಿಕೆ

ಬಳ್ಳಾರಿ, ಮಾ.26, ಗೌರಿಬಿದನೂರಿನಲ್ಲಿ ನಿನ್ನೆ ಮೃತಪಟ್ಟ ವೃದ್ಧೆಯ ವೈದ್ಯಕೀಯ ವರದಿ ಬಂದಿದ್ದು, ಅವರಲ್ಲಿ ಕೋವಿಡ್‌ 19 ದ ಸಾವು ಕೊರೋನಾ ದಿಂದ ಎಂದು ಲ್ಯಾಬ್ ರಿಪೋರ್ಟ್ ಬಂದಿದೆ.  ಇದರಿಂದಾಗಿ  ಕೊರೋನಾ ದಿಂದ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೇರಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಇದುವರೆಗೆ 1.30  ಲಕ್ಷ ಜನರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು. 214 ಜನರನ್ನು ಐಸೋಲೇಷನ್ ವಾರ್ಡ್  ನಲ್ಲಿರಿಸಿ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಅವರಿಂದು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದುವರೆಗೆ 52 ಪಾಸಿಟಿವ್ ಕೇಸ್ ಪತ್ತೆಯಾಗಿದೆ.ಇಂದು ಬಳ್ಳಾರಿ ಜಿಲ್ಲೆಯಿಂದ ಪ್ರಾರಂಭ ಮಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಕುರಿತು ಪರಿಶೀಲನಾ  ಸಭೆ ಮಾಡುತ್ತೇನೆ. ಬೇಕಾದ ಎಲ್ಲಾ ಸೌಲಭ್ಯ ಮಾಡಿಕೊಡಲು ಸೂಚಿಸುತ್ತೇನೆಂದರು.ಕೇಂದ್ರ  ಸರಕಾರದ ನಿಯಮಗಳನ್ನು ಪಾಲನೆ ಮಾಡಬೇಕು. ಲಾಕ್‌ಡೌನ್‌ ಮತ್ತು ಕೊರೋನಾ ತಡೆ ಕ್ರಮಗಳ ಬಗ್ಗೆ ಮುಖ್ಯ ಮಂತ್ರಿ ಯಡಿಯೂರಪ್ಪ ಮಾಹಿತಿ  ಪಡೆಯುತ್ತಿದ್ದಾರೆ. ಜನರು ಆತಂಕ ಪಡುವುದು ಬೇಡ, ಆದರೆ ಮುಂಜಾಗ್ರತೆ ಕೈಗೊಳ್ಳಬೇಕು. ಜನರು ಬೀದಿಗೆ ಬರುತ್ತಿದ್ದಾರೆ. ಅದನ್ನು ನಿಯಂತ್ರಿಸಲು ಪೊಲೀಸರು ತಮ್ಮ  ಕೆಲಸ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲು ಸೂಚಿಸುವೆ ಎಂದು ಭರವಸೆ ನೀಡಿದರು.