ಬಳ್ಳಾರಿ ಮೇ 19: ಕೋವಿಡ್ 19 ಗೆ ಸಿಲುಕಿ ಸುಮಾರು2 ತಿಂಗಳ ಕಾಲ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದ ಸಕರ್ಾರ ರಾಜ್ಯಾದ್ಯಂತ ಸಾರಿಗೆ ಸೇವೆಯನ್ನು ಆರಂಭಿಸಿದ್ದು, ಬಳ್ಳಾರಿ ಗಣಿನಾಡಿನಲ್ಲೂ ಬಸ್ ಸಂಚಾರ ಶುರುವಾಗಿದೆ. ಬಳ್ಳಾರಿ ಬಸ್ ನಿಲ್ದಾಣದಿಂದ ಹೊಸಪೇಟೆ, ಸಿರುಗುಪ್ಪ ಮತ್ತು ಬೆಂಗಳೂರಿಗೆ ಪ್ರಯಾಣ ಬೆಳೆಸಲು ಪ್ರಯಾಣಿಕರು ಕಾಯುತ್ತಿದ್ದ ದೃಶ್ಯಗಳು ಕಂಡು ಬಂದವು. ಇನ್ನು ಬಸ್ಗಳಲ್ಲಿ ಪ್ರಯಾಣಿಕರಿಗೆ ಸಾಮಾಜಿಕ ಅಂತರ, ಮಾಸ್ಕ್ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ಬಸ್ನಲ್ಲಿ ಕೇವಲ 30 ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.