ಕೋವಿಡ್-19: ರಾಷ್ಯಾದಲ್ಲಿ 9,623, ಫಿಲಿಪೈನಲ್ಸ್ ನಲ್ಲಿ 8,928ಕ್ಕೆ ಏರಿಕೆ

ನವದೆಹಲಿ, ಮೇ 2, ವಿಶ್ವದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಂತೆ ರಷ್ಯಾ ಹಾಗೂ ಫಿಲಿಪೈನ್ಸ್ ನಲ್ಲೂ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ರಷ್ಯಾದಲ್ಲಿ ಒಂದೇ ದಿನ 9,623 ಪ್ರಕರಣ ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,24,054ಕ್ಕೆ ಏರಿದೆ. ದೇಶದ 83 ಪ್ರಾಂತ್ಯದಲ್ಲಿ ಸೋಂಕಿತರು ಕಾಣಿಸಿಕೊಂಡಿದ್ದಾರೆ. ಮಾಸ್ಕೊ 5,358 ಪ್ರಕರಣದಲ್ಲಿ ದಾಖಲಾಗಿವೆ. ಇನ್ನು ದೇಶದಲ್ಲಿ ಒಟ್ಟಾರೆ 15,013 ರೋಗಿಗಳು ಚೇತರಿಸಿಕೊಂಡಿದ್ದಾರೆ. ಏಷ್ಯಾದ ಆಗ್ನೇಯ ದಿಕ್ಕಿನಲ್ಲಿರುವ ಫಿಲಿಪೈನಲ್ಸ್ ನಲ್ಲಿ 24 ಗಂಟೆಗಳಲ್ಲಿ 156 ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,928ಕ್ಕೆ ಏರಿದೆ. ಇನ್ನು ದೇಶದಲ್ಲಿ ಮಹಾಮಾರಿಯ ವಿರುದ್ಧ 1,124 ಹೋರಾಡಿ ಜಯ ಸಾಧಿಸಿದ್ದಾರೆ. ಫಿಲಿಫೈನ್ಸ್ ನಲ್ಲಿ ಕೊರೊನಾ ವೈರಸ್ ಗೆ 603 ಜನ ಜೀವ ಕಳೆದುಕೊಂಡಿದ್ದಾರೆ.