ಪುಣೆ, ಏಪ್ರಿಲ್ 8, ಕೊರೊನವೈರಸ್ ಹರಡುವಿಕೆ ಉಲ್ಬಣ ಹಿನ್ನೆಲೆಯಲ್ಲಿ ಬುಧವಾರದಿಂದ ಮೂರು ದಿನಗಳವರೆಗೆ ಔಷಧ ಅಂಗಡಿಗಳು ಮತ್ತು ಆಸ್ಪತ್ರೆಗಳನ್ನು ಹೊರತುಪಡಿಸಿ ಸಂಪೂರ್ಣ ಸ್ಥಗಿತಕ್ಕೆ ನಗರದ ವ್ಯಾಪಾರಿಗಳ ಸಂಘ ಕರೆ ನೀಡಿದೆ.ವೈರಸ್ ಸೋಂಕಿನಿಂದ ಇದುವರೆಗೆ ಎಂಟು ಜನರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಕೊವಿದ್-19 ರೋಗಿಗಳ ಸಂಖ್ಯೆ 157 ಕ್ಕೆ ತಲುಪಿದೆ.ಪ್ರಮುಖ ಮಾರುಕಟ್ಟೆ ಪ್ರದೇಶವಾದ ಟಿಂಗ್ರೆ ನಗರದ ವ್ಯಾಪಾರಿಗಳ ಸಂಘ ಎಲ್ಲಾ ಅಂಗಡಿಗಳನ್ನು ಮುಚ್ಚುವುದಾಗಿ ಘೋಷಿಸಿ ಎಂದು ಧನೋರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸುನಿಲ್ ಟಿಂಗ್ರೆ ತಿಳಿಸಿದ್ದಾರೆ.
ಕೊವಿದ್-19 ಹರಡುವಿಕೆ ತಡೆಗಟ್ಟಲು ದೇಶವ್ಯಾಪಿ ಲಾಕ್‌ಡೌನ್ ವಿಧಿಸಲಾಗಿದ್ದರೂ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಅನೇಕ ಜನರು ದಿನಸಿ ಅಂಗಡಿಗಳು, ಕೋಳಿ, ಮಾಂಸ ಮತ್ತು ತರಕಾರಿ ಅಂಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ತರಕಾರಿ, ದಿನಸಿ, ಬೇಕರಿ, ಕೋಳಿ ಮಾಂಸ ಮುಂತಾದ ಪದಾರ್ಥಗಳನ್ನು ಖರೀದಿಸಲು ಜನರು ಆಗಾಗ್ಗೆ ಬೀದಿಗಳಲ್ಲಿ ಬರುತ್ತಿದ್ದಾರೆ. ಅಲ್ಲದೆ, ವೃತ್ತಗಳಲ್ಲಿ ಜನರು ಮಾತನಾಡುತ್ತಾ ಕುಳುತಿರುವುದು ಮತ್ತು ಎಲ್ಲೆಡೆ ಜನಸಂದಣಿ ಇದ್ದು, ಸಾಮಾಜಿಕ ಅಂತರ ಕಾಪಾಡದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ದಿನಸಿ ಅಂಗಡಿಗಳು, ಹಾಲು ಡೈರಿ, ಕೋಳಿ, ಮಾಂಸ, ತರಕಾರಿ ಅಂಗಡಿಗಳು ಬುಧವಾರ, ಗುರುವಾರ ಮತ್ತು ಶುಕ್ರವಾರ ಮುಚ್ಚಲು ನಿರ್ಧರಿಸಲಾಗಿದೆ. ಈ ತೀರ್ಮಾನಕ್ಕೆ ಎಲ್ಲಾ ನಾಗರಿಕರು ಮತ್ತು ಕಾರ್ಮಿಕ ಸಂಘಟನೆಗಳು ಕೈಜೋಡಿಸಿವೆ ಎಂದು ಸುನಿಲ್ ಟಿಂಗ್ರೆ ತಿಳಿಸಿದ್ದಾರೆ.
ಪ್ರಮುಖ ಧನೋರಿ, ಭೈರವನಗರ, ಮುಂಜಾಬವಸ್ತಿ, ಅಂಬಾ ನಗರಿ, ಆನಂದ್ ಪಾರ್ಕ್, ಪೊರ್ವಾಲ್ ರಸ್ತೆ, ಧನೋರಿ ಗವೊಥನ್, ಟಿಂಗ್ರೆ ನಗರ್, ಕಲ್ವಾಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲ್ಲಾ ಅಂಗಡಿಗಳು ಮುಚ್ಚಲ್ಪಟ್ಟಿರುತ್ತವೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸಂಪೂರ್ಣ ಲಾಕ್‍ಡೌನ್‍ಗೆ ಸಹಕಾರ ನೀಡುವಂತೆ ಜನತೆ ಮನವಿ ಮಾಡಲಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.ಸ್ವಯಂಪ್ರೇರಣೆಯಿಂದ ವ್ಯಾಪಾರ ಸ್ಥಗಿತಗೊಳಿಸುವಂತೆ ವ್ಯಾಪಾರಿಗಳು ಕರೆ ನೀಡಿದ್ದಾರೆ. ಆಡಳಿತ ಯಾವುದೇ ಆದೇಶ ಹೊರಡಿಸಿಲ್ಲ ಎಂದು ವಿಶ್ರಾಂತ್ವಾಡಿ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಅಂಗಡಿಯನ್ನು ಮುಚ್ಚುವಂತೆ ಯಾರೊಬ್ಬರೂ ಒತ್ತಾಯಿಸುವುದಿಲ್ಲ. ಆದರೆ ಅದು ವ್ಯಾಪಾರಿಗಳ ಆಯ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ.