ನವದೆಹಲಿ, ಏ.10, ಕೊರೊನಾ ವೈರಸ್ ಸೋಂಕು ದೇಶದಲ್ಲಿ ವೇಗವಾಗಿ ಹರಡುತ್ತಿದ್ದು, ಶುಕ್ರವಾರ ಸೋಂಕಿತರ ಸಂಖ್ಯೆ 6000 ಗಡಿ ದಾಟಿದ್ದು, ಒಟ್ಟು 6412 ಜನರಲ್ಲಿ ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ. ಅಂಕಿ ಅಂಶಗಳ ಪ್ರಕಾರ, ಗುರುವಾರ ಸಂಜೆಯಿಂದ ಸಾವು ನೋವು 30 ರಷ್ಟು ಹೆಚ್ಚಾಗಿದೆ ಮತ್ತು ಸಾವಿನ ಸಂಖ್ಯೆ ಈಗ 199 ಆಗಿದೆ. ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು 5709 ಆಗಿದ್ದು, ಗುರುವಾರ ಸಂಜೆಯಿಂದ ಈವರೆಗೆ 491 ಪ್ರಕರಣ ಹೆಚ್ಚಾಗಿದೆ. ಇಲ್ಲಿಯವರೆಗೆ, 503 ಪ್ರಕರಣಗಳನ್ನು ಗುಣಪಡಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಇದುವರೆಗೆ 1364 ಪ್ರಕರಣಗಳು ಮತ್ತು 97 ಸಾವು ನೋವುಗಳು ದಾಖಲಾಗಿವೆ. ತಮಿಳುನಾಡಿನಲ್ಲಿ ಈ ಸಂಖ್ಯೆ 834 ಕ್ಕೆ ಏರಿದೆ. ಎಂಟು ಸಾವು ಸಂಭವಿಸಿವೆ. ದೆಹಲಿಯ 720 ಮತ್ತು 12 ಸಾವುಗಳು ಸಂಭವಿಸಿವೆ ಮತ್ತು ರಾಜಸ್ಥಾನ 463 ಪ್ರಕರಣ ದಾಖಲಾಗಿದ್ದು ಮೂರು ಜನ ನಿಧನರಾಗಿದ್ದಾರೆ. ತೆಲಂಗಾಣದಲ್ಲಿ 442 ಕೋವಿಡ್-19 ಪ್ರಕರಣಗಳು ಮತ್ತು ಉತ್ತರ ಪ್ರದೇಶದಲ್ಲಿ 410 ಪ್ರಕರಣಗಳಿವೆ.ಕಳೆದ ಮೂರರಿಂದ ನಾಲ್ಕು ದಿನಗಳಲ್ಲಿ, ಸರ್ಕಾರದ ಅಂಕಿಅಂಶಗಳ ಆಧಾರದ ಮೇಲೆ ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ ಎಂದು ದೃಢಪಡಿಸಲಾಗಿದೆ.ರಾಜ್ಯಗಳಲ್ಲಿ ಕೋವಿಡ್-19 ಹಾಟ್ ಸ್ಪಾಟ್‌ಗಳನ್ನು ಸರ್ಕಾರ ಗುರುತಿಸಿದೆ, ಆದರೆ ದೆಹಲಿಯು ಈಗಾಗಲೇ 20 ಕ್ಕೂ ಹೆಚ್ಚು ಹಾಟ್‌ಸ್ಪಾಟ್‌ಗಳನ್ನು ಸೀಲ್ ಮಾಡಿದೆ ಮತ್ತು ಉತ್ತರ ಪ್ರದೇಶವು ಅಂತಹ 100 ಪ್ರದೇಶಗಳಿಗೆ ಸೀಲ್ ಹಾಕಿದೆ, ಅಲ್ಲಿ ಜನರು ತಮ್ಮ ಮನೆಗಳಿಂದ ಹೊರಹೋಗಲು ಅವಕಾಶ ನೀಡಲಿಲ್ಲ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸಲು ಸರ್ಕಾರ ವ್ಯವಸ್ಥೆ ಮಾಡುತ್ತದೆ.