ನವದೆಹಲಿ, ಏ.27,ವಿಶ್ವದಲ್ಲಿ ಕೊರೊನಾ ವೈರಸ್ ಸೋಂಕು ವೇಗವಾಗಿ ಹರುಡುತ್ತಿದ್ದು, ತಗ್ಗುವ ಲಕ್ಷಣಗಳೇ ಕಾಣುತ್ತಿಲ್ಲ. ವಿಶ್ವದ ಬಹುತೇಕ ದೇಶಗಳಲ್ಲಿ ಈ ಸೋಂಕು ಜನರ ನಿದ್ದೆಗೆಡಿಸಿದೆ. ಅಲ್ಲದೆ ಕೊರೊನಾ ಪೀಡಿತರ ಸಂಖ್ಯೆ 30 ಲಕ್ಷದ ಸನಿಹದಲ್ಲಿದೆ. ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರ (ಸಿಎಸ್‌ಎಸ್‌ಇ) ಸೋಮವಾರ ಬೆಳಿಗ್ಗೆ ಬಿಡುಗಡೆಯಾದ ಪ್ರಕಾರ, ವಿಶ್ವಾದ್ಯಂತ ಈ ಮಾರಕ ವೈರಸ್‌ನಿಂದ 29.98 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 2.07 ಲಕ್ಷ ಜನರು ಸಾವನ್ನಪ್ಪಿದ್ದಾರೆ.ಕೊರೊನಾ ವೈರಸ್ ಭಾರತದಲ್ಲಿಯೂ ವೇಗವಾಗಿ ಹರಡುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಈವರೆಗೆ 20,385 ಜನರು ಸೋಂಕಿಗೆ ಒಳಗಾಗಿದ್ದು, 872 ಜನರು ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ಇಲ್ಲಿಯವರೆಗೆ 9.66 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೆ 54,881 ಜನರು ಸಾವನ್ನಪ್ಪಿದ್ದಾರೆ.
ಯುರೋಪಿಯನ್ ನಲ್ಲೂ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾಗಿದೆ. ಇಟಲಿಯಲ್ಲಿ 1.98 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, ಮತ್ತು ಇದುವರೆಗೆ 26,644 ಜನರು ಸಾವನ್ನಪ್ಪಿದ್ದಾರೆ. ಸ್ಪೇನ್ ನಲ್ಲಿ 2.27 ಲಕ್ಷ ಜನರು ತುತ್ತಾಗಿದ್ದು, 23,190 ಜನರು ಸಾವನ್ನಪ್ಪಿದ್ದಾರೆ.ಫ್ರಾನ್ಸ್‌ನಲ್ಲಿ 1.63 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, 22,890 ಜನರು ಸಾವನ್ನಪ್ಪಿದ್ದಾರೆ. ಜರ್ಮನಿಯಲ್ಲಿ 1.58 ಲಕ್ಷ ಜನರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು 5,976 ಜನರು ಸಾವನ್ನಪ್ಪಿದ್ದಾರೆ.ಇಂಗ್ಲೆಂಡ್ ನಲ್ಲಿ 1.55 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, 20,794 ಜನರು ಸಾವನ್ನಪ್ಪಿದ್ದಾರೆ. ಇರಾನ್‌ನಲ್ಲಿ 90,481 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 5,710 ಜನರು ಸಾವನ್ನಪ್ಪಿದ್ದಾರೆ. ರಷ್ಯಾದಲ್ಲಿ ಈವರೆಗೆ 80,949 ಕರೋನಾ ಸೋಂಕಿನ ಪ್ರಕರಣಗಳು ದೃಢಪಟ್ಟಿದೆ ಮತ್ತು ಈ ಸಾಂಕ್ರಾಮಿಕ ರೋಗದಿಂದ 747 ಜನರು ಸಾವನ್ನಪ್ಪಿದ್ದಾರೆ.ಬೆಲ್ಜಿಯಂನಲ್ಲಿ 7094, ನೆದರ್ಲ್ಯಾಂಡ್ ನಲ್ಲಿ 4491, ಬ್ರೆಜಿಲ್ ನಲ್ಲಿ 4286, ಟರ್ಕಿಯಲ್ಲಿ 2905, ಕೆನಡಾದಲ್ಲಿ 2663, ಸ್ವೀಡನ್ ನಲ್ಲಿ 2194, ಸ್ವಿಟ್ಜರ್ಲೆಂಡ್ ನಲ್ಲಿ 1610 ಮತ್ತು ಮೆಕ್ಸಿಕೋದಲ್ಲಿ 1391 ಜನರು ಸಾವನ್ನಪ್ಪಿದ್ದಾರೆ.ಪಾಕಿಸ್ತಾನದಲ್ಲಿ 13,328 ಜನರು ಕೊರೆನಾ ವೈರಸ್ ಸೋಂಕಿಗೆ ಒಳಗಾಗಿದ್ದು, 281 ಜನರು ಸಾವನ್ನಪ್ಪಿದ್ದಾರೆ ಈ ರೋಗದ ಕೇಂದ್ರವಾದ ಚೀನಾದಲ್ಲಿ ಇಲ್ಲಿಯವರೆಗೆ 83,912 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 4,637 ಜನರು ಸಾವನ್ನಪ್ಪಿದ್ದಾರೆ.