ಕೊವಿದ್‍-19: ದೇಶದಲ್ಲಿ 4,000 ದಾಟಿದ ದೃಢಪಟ್ಟ ಪ್ರಕರಣಗಳ ಸಂಖ್ಯೆ, 109 ಮಂದಿ ಸಾವು

ನವದೆಹಲಿ, ಏಪ್ರಿಲ್ 6, ಭಾನುವಾರ ಸಂಜೆಯಿಂದ ಹೊಸ ಪ್ರಕರಣಗಳ ಏರಿಕೆಯೊಂದಿಗೆ, ದೇಶದಲ್ಲಿ ಸೋಮವಾರದ ಬೆಳಿಗ್ಗೆ ವೇಳೆಗೆ ಕೊರೊನಾವೈರಸ್ ನ ದೃಢಪಟ್ಟ ಪ್ರಕರಣಗಳ ಸಂಖ್ಯೆ 4,000 ದಾಟಿದ್ದು, 4,067ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ. ಭಾನುವಾರ ಸಂಜೆಯಿಂದ ಸಕ್ರಿಯ ಪ್ರಕರಣಗಳು 447 ರಷ್ಟು ಏರಿಕೆಯಾಗಿದ್ದು, ಒಟ್ಟು ಸಂಖ್ಯೆ ಇದುವರೆಗೆ 3,666 ರಷ್ಟಿದೆ.ಸಾವಿನ ಸಂಖ್ಯೆ 109ಕ್ಕೆ ಏರಿದ್ದು, ಭಾನುವಾರ ಸಂಜೆಯಿಂದ 23 ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ನಿನ್ನೆ ಸಂಜೆಗೆ ಹೋಲಿಸಿದರೆ ಗುಣಮುಖರಾಗಿ ಆಸ್ಪತ್ರೆಯಿಂದ ನಿರ್ಗಮಿಸಿದವರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ. ನಿನ್ನೆ ಸಂಜೆಯಿಂದ 17 ಹೆಚ್ಚು ಮಂದಿ ಗುಣಮುಖರಾಗಿದ್ದು, ದೇಶಾದ್ಯಂತ ಸೋಂಕಿತ ಒಟ್ಟು 291 ಮಂದಿ  ಗುಣಮುಖರಾಗಿದ್ದಾರೆ. ಒಂದೆರಡು ದಿನಗಳಿಂದ ಪ್ರಕರಣಗ ಸಂಖ್ಯೆಯಲ್ಲಿ ಏರಿಕೆ ಮುಂದುವರಿದಿದ್ದು,  690 ಸೋಂಕಿತ ಪ್ರಕರಣಗಳು ಮತ್ತು 45 ಸಾವುಗಳ ವರದಿಯೊಂದಿಗೆ ಮಹಾರಾಷ್ಟ್ರ ದೇಶದಲ್ಲೇ ಹೆಚ್ಚು ಬಾಧಿತ ರಾಜ್ಯವೆನಿಸಿದೆ. ನಂತರದ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 571ಕ್ಕೆ ಏರಿದ್ದು, ಐವರು ಸಾವನ್ನಪ್ಪಿದ್ದಾರೆ.
ಮೂರನೇ ಸ್ಥಾನದಲ್ಲಿರುವ ದೆಹಲಿಯಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 503ಕ್ಕೆ ಏರಿದ್ದು, ಏಳು ಮಂದಿ ಸಾವನ್ನಪ್ಪಿದ್ದಾರೆ.
ತಬ್ಲೀಘಿ ಜಮಾತ್‌ ಧಾರ್ಮಿಕ ಸಭೆಗೆ ಸಂಬಂಧಿಸಿದ ಸೋಂಕಿನ ಪ್ರಕರಣಗಳು 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿವೆ. ಸಭೆಯಲ್ಲಿ ಪಾಲ್ಗೊಂಡವರು ಮತ್ತು ಅವರ ಸಂಪರ್ಕದಲ್ಲಿದ್ದವರಿಂದ  ದೃಢಪಟ್ಟ ಪ್ರಕರಣಗಳ ಏರಿಕೆಗೆ ಮತ್ತು ಸಾವುಗಳಿಗೆ ಪ್ರಮುಖ ಕಾರಣವಾಗಲ್ಲೊಂದಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ ವಾಲ್‍ ತಿಳಿಸಿದ್ದಾರೆ. ದೆಹಲಿ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳ, ತೆಲಂಗಾಣ, ಉತ್ತರ ಪ್ರದೇಶ, ಜಾರ್ಖಂಡ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ, ಅಂಡಮಾನ್ ಮತ್ತು ನಿಕೋಬಾರ್, ರಾಜಸ್ಥಾನ ಮತ್ತು ಅರುಣಾಚಲ ಪ್ರದೇಶಗಳಿಂದ ದೆಹಲಿಯ ತಿಬ್ಲಿಘಿ ಜಮಾತ್ ಸಭೆಗೆ ಈ ಜನರು ಹಾಜರಾಗಿದ್ದರು.
ಕಳೆದ ನಾಲ್ಕು-ಐದು ದಿನಗಳಲ್ಲಿ ಪ್ರಕರಣಗಳು ತೀವ್ರ ಏರಿಕೆಯಾಗುತ್ತಿರುವ ರಾಜ್ಯಗಳಲ್ಲಿ ದೆಹಲಿ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿವೆ.
ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತಿದೆ. ‘ವೈರಸ್ ನಮ್ಮನ್ನು ಬೆನ್ನಟ್ಟುವ ಬದಲು, ನಾವು ವೈರಸ್ ಅನ್ನು ಹಿಮ್ಮೆಟ್ಟುತ್ತೇವೆ.’ ಎಂದು ಲವ್‍ ಅಗರ್ ವಾಲ್‍ ಭಾನುವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ ಗಾಳಿಯಿಂದ ವೈರಸ್ ಹರಡುವಿಕೆಗೆ ಇದುವರೆಗೆ ಯಾವುದೇ ಪುರಾವೆಗಳಿಲ್ಲ. ದ್ರವ ಕಣಗಳಿಂದ ಕೊರೊನ ವೈರಸ್‍ ಹರಡುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧಿಕಾರಿ ಭಾನುವಾರ ತಿಳಿಸಿದ್ದಾರೆ.