ಕೊವಿಡ್‍ -19: ಚೀನಾದಲ್ಲಿ ಸ್ಥಳೀಯ ಪ್ರಸರಣದ ಹೊಸ ಪ್ರಕರಣಗಳ ವರದಿಯಿಲ್ಲ

ಬೀಜಿಂಗ್, ಮೇ 7, ಚೀನಾದಲ್ಲಿ ಸ್ಥಳೀಯವಾಗಿ ಪ್ರಸರಣಗೊಂಡ ಕೊರೊನವೈರಸ್ ಸೋಂಕಿನ ಹೊಸ ಪ್ರಕರಣಗಳು ದೃಢಪಟ್ಟಿಲ್ಲ ಎಂದು ಅಲ್ಲಿನ ಆರೋಗ್ಯ ಆಡಳಿತ ತಿಳಿಸಿದೆ. ಆದರೆ, ವಿದೇಶ ಪ್ರಯಾಣ ಹಿನ್ನೆಲೆಯ ಒಂದು ಪ್ರಕರಣ ಶಾಂಘೈನಲ್ಲಿ, ಮತ್ತೊಂದು ಪ್ರಕರಣ ಗುವಾಂಗ್‍ಡಾಂಗ್‍ ಪ್ರಾಂತ್ಯದಲ್ಲಿ ಬುಧವಾರ ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ. ಇದಲ್ಲದೆ, ಶಾಂಘೈನಲ್ಲಿ ಶಂಕಿತ ವಿದೇಶ ಪ್ರಯಾಣ ಹಿನ್ನೆಲೆಯ ಎರಡು ಪ್ರಕರಣಗಳು ವರದಿಯಾಗಿವೆ. ಸೋಂಕು ಸಂಬಂಧಿತ ಸಾವುಗಳು ವರದಿಯಾಗಿಲ್ಲ ಎಂದು ಆಯೋಗ ಹೇಳಿದೆ.