ಕೋವಿಡ್ -19: ಮಂಗಳೂರು ಗೋಲಿಬಾರ್ ವಿಚಾರಣೆ ಮುಂದಕ್ಕೆ

ಮಂಗಳೂರು, ಮಾರ್ಚ್ 23, ಕರೋನ ಹಿನ್ನಲೆಯಲ್ಲಿ  ಸಿಎಎ ವಿರೋಧಿ ಪ್ರತಿಭಟನೆ, ಮತ್ತು  ಪೊಲೀಸ್ ಫೈರಿಂಗ್ ನಲ್ಲಿ ಇಬ್ಬರು ಮೃತಪಟ್ಟ ಘಟನೆಯ ಬಗ್ಗೆ  ನಡೆಯುತ್ತಿರುವ ಮ್ಯಾಜಿಸ್ಟೀರಿಯಲ್ ವಿಚಾರಣೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು   ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಸೋಮವಾರ ಹೇಳಿದ್ದಾರೆ
ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಇಂದು  ಮ್ಯಾಜಿಸ್ಟ್ರೇಟ್ ಮುಂದೆ ವಿಚಾರಣೆಗೆ ಹಾಜರಾಗಿದ್ದರು ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರು ಮ್ಯಾಜಿಸ್ಟ್ರೇಟ್ ಮುಂದೆ ಇಂದೇ  ಹಾಜರಾಗಬೇಕಿದೆ. ಮಂಗಳೂರು ನಗರದಲ್ಲಿ   ಹಿಂಸಾಚಾರ ಭುಗಿಲೆದ್ದ ಕಾರಣ  ಪೋಲೀಸರ  ಗುಂಡಿಗೆ ನೌಶೀನ್ ಮತ್ತು ಜಲೀಲ್ ಮೃತಪಟ್ಟ ನಂತರ  ರಾಜ್ಯ ಸರ್ಕಾರವು ಮ್ಯಾಜಿಸ್ಟೀರಿಯಲ್ ಮತ್ತು ಸಿಐಡಿ ತನಿಖೆಗೆ ಆದೇಶಿಸಿತ್ತು. ಸರ್ಕಾರದ ಆದೇಶದ ಪ್ರಕಾರ, ಇದೆ 23 ರ ಮೊದಲು ವಿಚಾರಣಾ  ವರದಿಯನ್ನು ಸಲ್ಲಿಸಬೇಕಾಗಿತ್ತು. ದಾಖಲೆಗಳು ಮತ್ತು ವಿಡಿಯೋ ಗಳನ್ ನುಪರಿಶೀಲಿಸಬೇಕಾಗಿರುವುದರಿಂದ ಹೆಚ್ಚಿನ ಸಮಯದವರೆಗೆ ಮ್ಯಾಜಿಸ್ಟ್ರೇಟ್ ಮಾಡಿದ ಕೋರಿಕೆಯ ಮೇರೆಗೆ, ಏಪ್ರಿಲ್ 23 ರೊಳಗೆ ವರದಿ ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿದೆ.