ಕೋವಿಡ್‌-19: ಕುವೈಟ್‌ನಲ್ಲಿ ಸೋಂಕಿತರ ಸಂಖ್ಯೆ 665ಕ್ಕೆ ಏರಿಕೆ

ಕುವೈಟ್‌ ಸಿಟಿ, ಮೇ 26, ಕುವೈಟ್‌ನಲ್ಲಿ ಮತ್ತೆ 9 ಕೋವಿಡ್‌-19 ಸಂಬಂಧಿತ ಸಾವು ಸಂಭವಿಸಿದ್ದು, 665 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ  ಸೋಂಕಿತರ ಸಂಖ್ಯೆ 21,967ಕ್ಕೆ ಹಾಗೂ ಸಾವಿನ ಸಂಖ್ಯೆ 165ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಈ ಮಧ್ಯೆ 504 ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ. ಇದರೊಂದಿಗೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 6621ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಎಲ್ಲಾ ಹೊಸ ಪ್ರಕರಣಗಳು ಈ ಹಿಂದೆ ಸೋಂಕಿತ ವ್ಯಕ್ತಿಗಳೊಂದಿಗೆ ಸಂಪರ್ಕದಿಂದ ಉಂಟಾಗಿದೆ ಅಥವಾ ಸೋಂಕಿನ ಮೂಲಗಳಿಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಡಾ.ಅಬ್ದುಲ್ಲಾ ಅಲ್ ಸನಾದ್ 'ಕುನಾ'ಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕೊರೋನವೈರಸ್ ಹರಡುವುದನ್ನು ತಡೆಯಲು ಕುವೈಟ್‌ನಲ್ಲಿ ಮೇ 30 ರವರೆಗೆ 24 ಗಂಟೆಗಳ ರಾಷ್ಟ್ರವ್ಯಾಪಿ ಕರ್ಫ್ಯೂ ಜಾರಿಗೊಳಿಸಲಾಗಿದೆ.