ಕೋವಿಡ್ -19: ಒಡಿಶಾ ಸಿಎಂ ನಿಧಿಗೆ ಹಾಕಿ ಇಂಡಿಯಾ 21 ಲಕ್ಷ ನೆರವು

ನವದೆಹಲಿ, ಏ 8,ಪ್ರಸ್ತುತ ದೇಶದಲ್ಲಿ ಕೊರೊನಾ ವೈರಸ್ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದರ ವಿರುದ್ಧದ ಹೋರಾಟಕ್ಕೆ ಹಾಕಿ ಇಂಡಿಯಾ ಬುಧವಾರ ಒಡಿಶಾ ಮುಖ್ಯಮಂತ್ರಿ ಪರಿಹಾರ ನಿಧಿಗೆ 21 ಲಕ್ಷ ರೂಪಾಯಿ ನೆರವು ನೀಡಿದೆ. ಒಡಿಶಾದಲ್ಲಿ ಹಲವು ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದನ್ನು ಮನಗಂಡಿರುವ ಹಾಕಿ ಇಂಡಿಯಾ ಕಾರ್ಯನಿರ್ವಹಣಾ ಮಂಡಳಿ ರಾಜ್ಯ ಸರ್ಕಾರಕ್ಕೆ ನೆರವು ಪ್ರಕಟಿಸುವ ಕುರಿತು ಅವಿರೋಧ ನಿರ್ಧಾರ ಕೈಗೊಂಡಿದೆ. ಒಡಿಶಾ ರಾಜ್ಯವು ಯಾವಾಗಲೂ ಹಾಕಿಯ ದೊಡ್ಡ ಬೆಂಬಲಿಗರಾಗಿದ್ದು, ನಾವೆಲ್ಲರೂ ಎದುರಿಸುತ್ತಿರುವ ಪ್ರಸ್ತುತ ಬಿಕ್ಕಟ್ಟನ್ನು ಗಮನಿಸಿದರೆ, 21 ಲಕ್ಷ ರೂ.ಗಳ ಈ ಕೊಡುಗೆ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ, ಎಂದು ಹಾಕಿ ಇಂಡಿಯಾ ಹೇಳಿದೆ.