ಕೋವಿಡ್-19: ಫ್ರಾನ್ಸ್ ನಲ್ಲಿ 28 ಸಾವಿರ ದಾಟಿದ ಸಾವಿನ ಸಂಖ್ಯೆ

ಪ್ಯಾರೀಸ್, ಮೇ 18,ವಿಶ್ವದ ಬಹಳಷ್ಟು ದೇಶಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಕೊರೊನಾ ವೈರಸ್ ಗಂಭೀರ ಸ್ವರೂಪ ಪಡೆದಿದೆ. ಫ್ರಾನ್ಸ್ ನಲ್ಲೂ ಸೋಂಕು ತನ್ನ ಅಟ್ಟಹಾಸ ಮೆರೆಯುತ್ತಿದೆ. ಕಳೆದ 24 ಗಂಟೆಗಳಲ್ಲಿ 483 ಹೊಸ ಸೋಂಕಿತರು ಮೃತ ಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 28,108ಕ್ಕೆ ಏರಿದೆ. ಫ್ರೆಂಚ್ ಆರೋಗ್ಯ ಸಚಿವಾಲಯ ಈ ಮಾಹಿತಿಯನ್ನು ಭಾನುವಾರ ನೀಡಿದೆ. ಫ್ರಾನ್ಸ್‌ನಲ್ಲಿ 54 ಜನರು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದರೆ, 429 ಜನರು ಕೋವಿಡ್ -19 ಪೀಡಿಗಿನಿಂದ ವೃದ್ಧಾಶ್ರಮಗಳಲ್ಲಿ ಮೃತಪಟ್ಟಿದ್ದಾರೆ.
ಫ್ರಾನ್ಸ್‌ನಲ್ಲಿ ಈವರೆಗೆ 1,79,693 ಕರೋನಾ ಸೋಂಕಿನ ಪ್ರಕರಣಗಳು ದೃಢಪಟ್ಟಿದೆ. ದೇಶದಲ್ಲಿ, 19,361 ರೋಗಿಗಳನ್ನು ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು, ಈ ಪೈಕಿ 2087 ಜನರು ಗಂಭೀರ ಸ್ಥಿತಿಯಲ್ಲಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಫ್ರಾನ್ಸ್ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿದೆ ಮತ್ತು ಕೆಲವು ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟಿದೆ. ಮುಂದಿನ 10 ರಿಂದ 15 ದಿನಗಳಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು ಎಂದು ಫ್ರೆಂಚ್ ಆರೋಗ್ಯ ಸಚಿವ ಆಲಿವರ್ ವಿರೆನ್ ಹೇಳಿದ್ದಾರೆ.