ನವದೆಹಲಿ, ಮಾರ್ಚ್ 23, ಕೊವಿದ್-19 ಸೋಂಕಿನಿಂದ ಸೋಮವಾರ ಬೆಳಿಗ್ಗೆ ದೇಶದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 415 ಕ್ಕೆ ತಲುಪಿದ್ದು, ಇದುವರೆಗೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಸೋಮವಾರದ ರಾಜ್ಯವಾರು ಮಾಹಿತಿಯನ್ನು ಇನ್ನೂ ಸಿದ್ಧಪಡಿಸಲಾಗಿಲ್ಲ.ಸೋಮವಾರದವರೆಗೆ, 64 ಹೊಸ ಪ್ರಕರಣಗಳು ಮತ್ತು ಎರಡು ಸಾವುಗಳ ಸಂಭವಿಸಿವೆ. ಮಹಾರಾಷ್ಟ್ರವು ಅತಿ ಹೆಚ್ಚು, 60 ಪ್ರಕರಣಗಳೊಂದಿಗೆ ಕೇರಳ ಎರಡನೇ ಸ್ಥಾನದಲ್ಲಿದೆ. ದೆಹಲಿ ಸೋಂಕಿನ 28 ಪ್ರಕರಣಗಳು ದೃಢಪಟ್ಟಿದ್ದು, ಒಂದು ಸಾವು ವರದಿಯಾಗಿದೆ. ಭಾರತದಲ್ಲಿ, ಚಿಕಿತ್ಸೆ ಪಡೆದು ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ 23 ರಷ್ಟಿದ್ದು, ಒಬ್ಬ ರೋಗಿಯು ದೇಶದಿಂದ ಹೊರಹೋಗಿದ್ದಾನೆ ಎಂದು ಸಚಿವಾಲಯ ತಿಳಿಸಿದೆ.ಭಾರತದಲ್ಲಿ 41 ವಿದೇಶಿ ಪ್ರಜೆಗಳು ಕರೋನವೈರಸ್‌ನಿಂದ ಬಳಲುತ್ತಿದ್ದಾರೆ. ಸೋಮವಾರ ಬೆಳಿಗ್ಗೆ 10 ಗಂಟೆಯವರೆಗೆ ಒಟ್ಟು 18,383 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 15,17,327 ಪ್ರಯಾಣಿಕರನ್ನು ವಿವಿಧ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ, ರಾಷ್ಟ್ರ ರಾಜಧಾನಿ, ವಾಣಿಜ್ಯ ರಾಜಧಾನಿ ಮತ್ತು ಮಹಾನಗರಗಳು ಸೇರಿದಂತೆ ಒಟ್ಟು 75 ಜಿಲ್ಲೆಗಳನ್ನು ಮಾರ್ಚ್ 31 ರವರೆಗೆ ಲಾಕ್‍ಡೌನ್(ಸಂಪೂರ್ಣಸ್ತಬ್ಧ) ಮಾಡಲಾಗಿದೆ.ರೈಲ್ವೆ ಸೇವೆಗಳು, ಅಂತರರಾಜ್ಯ ಬಸ್‍ಗಳು ಸೇರಿದಂತೆ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ. ಅಗತ್ಯ ಸೇವೆಗಳಾದ ಆಸ್ಪತ್ರೆಗಳು, ದೂರಸಂಪರ್ಕ, ಔಷಧಿ ಅಂಗಡಿಗಳು ಮತ್ತು ಕಿರಾಣಿ ಮಾತ್ರ ತೆರೆದಿರುತ್ತವೆ.