ಕೋವಿಡ್-19: ಭಾರತದಲ್ಲಿ ಒಂದೇ ದಿನ 9,887 ಹೊಸ ಪ್ರಕರಣ, 294 ಜನ ಸಾವು

ನವದೆಹಲಿ, ಜೂನ್ 6, ಭಾರತದಲ್ಲಿ ಕೊರೊನಾ ವೈರಸ್ “ಕೋವಿಡ್-19” ಪ್ರಕರಣಗಳ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆ ಆಗುತ್ತಿದ್ದು, ಆತಂಕ ಸೃಷ್ಟಿಸಿದೆ. ದೇಶದಲ್ಲಿ ಒಂದೇ ದಿನ 9887 ಹೊಸ ಕೊರೊನಾ ಪ್ರಕರಣ ವರದಿಯಾಗಿದ್ದು, 294 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ ದೇಶದಲ್ಲಿ 2.36 ಲಕ್ಷಕ್ಕೆ ಏರಿದೆ. ವಿಶ್ವದ ಅತಿ ಹೆಚ್ಚು ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನವನ್ನು ತಲುಪಿದೆ.ಈ ಅವಧಿಯಲ್ಲಿ, ಕೊರೊನಾ ಸೋಂಕಿನಿಂದ 294 ಜನರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 6,642 ಆಗಿದೆ. ಸೋಂಕಿತರ ಸಂಖ್ಯೆಯಲ್ಲಿ ಭಾರತವು ಇಟಲಿಯನ್ನು ಹಿಂದಿಕ್ಕಿ ವಿಶ್ವದಲ್ಲಿ ಆರನೇ ಸ್ಥಾನದಲ್ಲಿದೆ.

ಇಟಲಿಯಲ್ಲಿ, 2,34,531 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 33,774 ಜನರು ಸಾವನ್ನಪ್ಪಿದ್ದಾರೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ, 9,887 ಹೊಸ ಪ್ರಕರಣಗ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 2,36,657 ಕ್ಕೆ ಏರಿದೆ. ಪ್ರಸ್ತುತ ದೇಶದಲ್ಲಿ 1,15,942 ಸಕ್ರಿಯ ಕರೋನಾ ಪ್ರಕರಣಗಳಿದ್ದು, 1,14,073 ಜನರು ಈ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡಿದ್ದಾರೆ.ವಿಶ್ವದ ಕರೋನಾ ಸೋಂಕಿನಿಂದ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ, ಇಲ್ಲಿಯವರೆಗೆ ಅಮೆರಿಕದಲ್ಲಿ 18,97,239 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 1,09,042 ಮಂದಿ ಸಾವನ್ನಪ್ಪಿದ್ದಾರೆ. ನಂತರದ ಸ್ಥಾನದಲ್ಲಿ ಬ್ರೆಜಿಲ್ (6.45 ಲಕ್ಷ), ರಷ್ಯಾ (4.50 ಲಕ್ಷ), ಬ್ರಿಟನ್ (2.83 ಲಕ್ಷ) ಮತ್ತು ಸ್ಪೇನ್ (2.41 ಲಕ್ಷ) ಮತ್ತು ಭಾರತ (2.36 ಲಕ್ಷ) ದೇಶಗಳು ಇವೆ.