ಕೋವಿಡ್‌-19: ಬಾಂಗ್ಲಾದೇಶದಲ್ಲಿ 500 ಮಂದಿ ಸಾವು

ಢಾಕ, ಮೇ 25,ಬಾಂಗ್ಲಾದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿಗೆ 21 ಮಂದಿ ಬಲಿಯಾಗುವುದರೊಂದಿಗೆ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 501ಕ್ಕೆ ಏರಿಕೆಯಾಗಿದೆ ಎಂದು ಸೋಮವಾರ ಅಧಿಕೃತ ಮೂಲಗಳು ತಿಳಿಸಿವೆ.ಇದಲ್ಲದೆ 1,975ಕ್ಕೂ ಹೆಚ್ಚು ಜನರಿಗೆ ಸೋಂಕಿನ ಪಾಸಿಟಿವ್ ಇದ್ದು, ಒಟ್ಟು ಪ್ರಕರಣಗಳ ಸಂಖ್ಯೆ 35,585ಕ್ಕೆ ಏರಿದೆ.ಆರೋಗ್ಯ ನಿರ್ದೇಶನಾಲಯದ ಹೆಚ್ಚುವರಿ ಮಹಾನಿರ್ದೇಶಕ ಪ್ರೊಫೆಸರ್ ಡಾ. ನಾಸಿಮಾ ಸುಲ್ತಾನಾ ತಮ್ಮ ದೈನಂದಿನ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಅವರು, ಕಳೆದ 24 ಗಂಟೆಗಳಲ್ಲಿ ಪರೀಕ್ಷಿಸಿದ 9,451 ಮಾದರಿಗಳಲ್ಲಿ 1,975 ಮಾದರಿಗಳು ಪಾಸಿಟಿವ್‌ ಆಗಿದೆ ಎಂದು ಅವರು ಹೇಳಿದರು.ಇದಲ್ಲದೆ 433 ಜನರು ಈ ಕಾಯಿಲೆಯಿಂದ ಗುಣಮುಖರಾಗಿದ್ದಾರೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 7,334 ಕ್ಕೆ ಏರಿಕೆಯಾಗಿದೆ.