ಮಾಸ್ಕೋ, ಏ.29,ರಷ್ಯಾದಲ್ಲಿ ಒಂದೇ ದಿನ 5,481 ಕೊರೊನಾ ವೈರಸ್ ಪೀಡಿತರ ಕಂಡು ಬಂದಿದ್ದು, ಸೋಂಕಿತರ ಸಂಖ್ಯೆ 99,399ಕ್ಕೆ ಏರಿದೆ. ಬುಧವಾರ ಕೊರೊನಾ ವೈರಸ್ ಹೋರಾಟ ಸಂಸ್ಥೆ ನೀಡಿದ ಮಾಹಿತಿಯಲ್ಲಿ ಈ ಅಂಕಿ ಅಂಶಗಳು ಬೆಳಕಿಗೆ ಬಂದಿವೆ. ಮಾಸ್ಕೋ ನಗರದಲ್ಲಿ 2,220 ಪ್ರಕರಣ ಪತ್ತೆಯಾಗಿವೆ. ಇನ್ನು ಮಾಸ್ಕೋ ಪ್ರಾಂತ್ಯದಲ್ಲಿ 686, ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ 290 ಪ್ರಕರಣ ಬೆಳಕಿಗೆ ಬಂದಿವೆ. ಇನ್ನು ಕಳೆದ 24 ಗಂಟೆಗಳಲ್ಲಿ 108 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಸಂಖ್ಯೆ 972ಕ್ಕೆ ತಲುಪಿದೆ. ಉಳಿದಂತೆ 10,286 ಜನರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.