ಕೋವಿಡ್-19: ಮಹಾರಾಷ್ಟ್ರದಲ್ಲಿ 4000, ದೆಹಲಿಯಲ್ಲಿ 2000ಗಡಿ ದಾಟಿದ ಸೋಂಕಿತರು

ನವದೆಹಲಿ, ಏ.20 , ಕೊರೊನಾ ವೈರಸ್ “ಕೋವಿಡ್-19” ಸಾಂಕ್ರಾಮಿಕ ರೋಗಕ್ಕೆ ಮಹಾರಾಷ್ಟ್ರ ಕಂಗಾಲಾಗಿದ್ದು, ಪೀಡಿತರ ಸಂಖ್ಯೆ ನಾಲ್ಕು ಸಾವಿರದ ಗಡಿ ದಾಟಿದೆ. ಇನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಎರಡು ಸಾವಿರಕ್ಕೂ ಹೆಚ್ಚಾಗಿದೆ. ಮಹಾರಾಷ್ಟ್ರ, ದೆಹಲಿ, ಗುಜರಾತ್, ರಾಜಸ್ಥಾನ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ, ಕರೋನಾ ವೈರಸ್ (ಕೋವಿಡ್ -19) ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮತ್ತು ಈ ಆರು ರಾಜ್ಯಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12311 ಕ್ಕೆ ಏರಿದೆ. ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಸೋಂಕಿತರ ಸಂಖ್ಯೆ 17265 ಕ್ಕೆ ಏರಿದೆ ಮತ್ತು ಈ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 543 ಕ್ಕೆ ತಲುಪಿದೆ. ಈವರೆಗೆ 2547 ಜನರನ್ನು ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

 ರಾಜ್ಯವಾರು ಪೀಡಿತರ ಸಂಖ್ಯೆ
 

ರಾಜ್ಯ…………. ಸೋಂಕಿತರ ಸಂಖ್ಯೆ .... ಗುಣಮುಖ… .. ಸಾವು.
 
ಆಂಧ್ರಪ್ರದೇಶ ............ 646 ......... 42 ........... 15
 
ಅಂಡಮಾನ್ ನಿಕೋಬಾರ್ ...... 15 .......... 11 ............ 0
 
ಅರುಣಾಚಲ ಪ್ರದೇಶ ........ 1 ........... 0 ............... 0
 
ಅಸ್ಸಾಂ .................... 35 ............ 17 ............. 1
 
ಬಿಹಾರ .................... 93 ........... 42 ............ 2
 
ಚಂಡೀಗರ್................. 26 ............ 13 ............. 0
 
ಛತ್ತೀಸಗಢ್ ............. 36 ........... 25 ............ 0
 
ದೆಹಲಿ ............. 2003 ........... 72 ............ 45
 
ಗೋವಾ ..................... 7 ............. 7 ............. 0
 
ಗುಜರಾತ್ ............... 1743 .......... 105 ........... 63
 
ಹರಿಯಾಣ ............. 233 ......... 87 ............... 3
 
ಹಿಮಾಚಲ ಪ್ರದೇಶ ........ 39 .......... 16 .............. 1
 
ಜಮ್ಮು ಮತ್ತು ಕಾಶ್ಮೀರ .......... 350 ......... 56 ............. 5
 
ಜಾರ್ಖಂಡ್ ................. 42 ........... 0 ............... 2
 
ಕರ್ನಾಟಕ ............... 390 ......... 111 .............. 16
 
ಕೇರಳ .................. 402 ........ 270 ............... 3
 
ಲದಾಕ್ ................... 18 .......... 14 ............... 0
 
ಮಧ್ಯಪ್ರದೇಶ ............. 1407 ...... 127 ............. 70
 
ಮಹಾರಾಷ್ಟ್ರ ................. 4203 ...... 507 ......... 223
 
ಮಣಿಪುರ ..................... 2 ........... 1 ............ 0
 
ಮೇಘಾಲಯ .................. 11 ............ 0 ............ 1
 
ಮಿಜೋರಾಂ .................. 1 ............. 0 ............ 0
 
ನಾಗಾಲ್ಯಾಂಡ್ ................. 0 ............. 0 ............ 0
 
ಒಡಿಶಾ ............... 68 .......... 24 ............ 1
 
ಪುದುಚೇರಿ .................. 7 ............. 3 ............. 0
 
ಪಂಜಾಬ್ ................ 219 ........... 31 ........... 16
 
ರಾಜಸ್ಥಾನ .......... 1478 ......... 183 ........... 14
 
ತಮಿಳುನಾಡು .......... 1477 ........ 411 ........... 15
 
ತೆಲಂಗಾಣ .............. 844 ........ 186 ........... 18
 
ತ್ರಿಪುರ .................... 2 ............ 1 ............. 0
 
ಉತ್ತರಾಖಂಡ ............. 44 ............ 11 ............ 0
 
ಉತ್ತರ ಪ್ರದೇಶ ............ 1084 ......... 108 ........... 17
 
ಪಶ್ಚಿಮ ಬಂಗಾಳ ....... 339 ......... 66 .......... 12