ಕೊವಿಡ್‌-೧೯ ಜರ್ಮನಿಯಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ೧೭೧,೩೦೬ಕ್ಕೆ ಏರಿಕೆ

ಬರ್ಲಿನ್‌, ಮೇ೧೩,ಜರ್ಮನಿಯಲ್ಲಿ ಕಳೆದ ೨೪ ತಾಸಿನಲ್ಲಿ ಹೊಸ ೭೯೮ ಪ್ರಕರಣಗಳು ದೃಢಪಡುವುದರೊಂದಿಗೆ ಕೊವಿಡ್‌-೧೯ ಸೋಂಕು ಉಲ್ಬಣವಾದಾಗಿನಿಂದ ಸೋಂಕಿತ ಪ್ರಕರಣಗಳ ಸಂಖ್ಯೆ ೧೭೧,೩೦೬ಕ್ಕೆ ಏರಿದೆ ಎಂದು  ರಾಬರ್ಟ್ ಕೋಚ್‌ ಸಂಸ್ಥೇ ಬುಧವಾರ ತಿಳಿಸಿದೆ.  ಕಳೆದ ೨೪ ತಾಸಿನಲ್ಲಿ ೧೦೧ ಅಧಿಕ ಮಂದಿ ಸಾವನ್ನಪ್ಪುವುದರೊಂದಿಗೆ ಸೋಂಕಿಗೆ ದೇಶದಲ್ಲಿ ಬಲಿಯಾದವರ ಸಂಖ್ಯೆ ೭೬೩೪ಕ್ಕೆ ಏರಿದೆ. ಹಿಂದಿನ ದಿನ ಸೋಂಕಿಗೆ ೧೧೬ ಮಂದಿ ಮೃತಪಟ್ಟಿದ್ದರು. ಸಮಾಧಾನ ವಿಷಯವೆಂದರೆ, ಜರ್ಮನಿಯಲ್ಲಿ ಇದುವರೆಗೆ ೧,೪೮,೦೦೦ ಮಂದಿ ಗುಣಮುಖರಾಗಿದ್ದಾರೆ.
ದೇಶದ ಬ್ರವೇರಿಯಾ ರಾಜ್ಯದಲ್ಲಿ ೪೪,೮೦೨ ಅತಿಹೆಚ್ಚು ಪ್ರಕರಣಗಳು ವರದಿಯಾಗಿದ್ದು, ದಕ್ಷಿಣ ವೆಸ್ಟ್ ಫಾಲಿಯಾದಲ್ಲಿ ೩೫,೫೫೫ ಪ್ರಕರಣಗಳು, ಬಡೆನ್‌-ವಟೆಂಮ್‌ ಬರ್ಗ್ ನಲ್ಲಿ ೩೩,೫೧೮ ಪ್ರಕರಣಗಳು ದೃಢಪಟ್ಟಿವೆ. ರಾಜಧಾನಿ ಬರ್ಲಿನ್‌ ನಲ್ಲಿ ೬,೨೯೮ ಪ್ರಕರಣಗಳು ಇದುವರೆಗೆ ದೃಢಪಟ್ಟಿವೆ. ಕಳೆದ ಏಪ್ರಿಲ್‌ ಅಂತ್ಯದಿಂದ ದೇಶದಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಜರ್ಮನಿ ಸರ್ಕಾರ ಹೇರಿದೆ. ಜೂನ್‌ ೫ ರವರೆಗೆ ದೇಶದಲ್ಲಿ ಸಾಮಾಜಿಕ ಅಂತರ ನಿಯಮಗಳು ಜಾರಿಯಲ್ಲಿವೆ.