ಕೋವಿಡ್ -೧೯: ಕಲಬುರಗಿಯಲ್ಲಿ ಎರಡು ಹೊಸ ಪ್ರಕರಣ ವರದಿ

ಕಲಬುರಗಿ, ಏಪ್ರಿಲ್ ೭,ಕಲಬುರಗಿಯಲ್ಲಿ ಮಂಗಳವಾರ  ಎರಡು ಕೋವಿಡ್ -೧೯ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ  ಜಿಲ್ಲೆಯಲ್ಲಿ ಕೊರೊನಾ ವೈರಸ್  ದೃಢಪಟ್ಟ ಪ್ರಕರಣಗಳ ಸಂಖ್ಯೆ ೭ಕ್ಕೆ ಏರಿಕೆಯಾಗಿದೆ.ಕೊರೊನಾ ಸೋಂಕಿನಿಂದ ಮೃತಪಟ್ಟ  ೭೩ ವರ್ಷದ ವ್ಯಕ್ತಿಗೆ  ಚಿಕಿತ್ಸೆ ನೀಡಿದ್ದ  ವೈದ್ಯರ  ಸೊಸೆ ಸೇರಿದಂತೆ  ಇಬ್ಬರು ವ್ಯಕ್ತಿಗಳ  ರಕ್ತ ಹಾಗೂ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ  ಸೋಂಕು ಕಾಣಿಸಿಕೊಂಡಿರುವುದು  ದೃಢಪಟ್ಟಿದೆ  ಎಂದು  ಮಂಗಳವಾರ  ಮಧ್ಯಾಹ್ನ ಬಿಡುಗಡೆಗೊಳಿಸಿರುವ  ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.ಕಲಬುರಗಿ ಮೂಲದ  ೫೭ ವರ್ಷದ ಮತ್ತೊಬ್ಬ  ವ್ಯಕ್ತಿಯಲ್ಲೂ   ಸೋಂಕು ದೃಢಪಟ್ಟಿದ್ದು, ವಿದೇಶ ಪ್ರವಾಸ ಚರಿತ್ರೆ ಇಲ್ಲದ, ಈ ವ್ಯಕ್ತಿ ಶ್ವಾಸಕೋಶ ಹಾಗೂ ಉಸಿರಾಟ ಸಮಸ್ಯೆಗಳಿಂದ ಬಳಲುತ್ತಿದ್ದ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.