ನವದೆಹಲಿ, ಏ 19 (ಯುಎನ್ಐ) ಕೋವಿಡ್-19 ವಿರುದ್ಧದ ಹೋರಾಟವನ್ನು ಬಲಗೊಳಿಸುವ ಸಲುವಾಗಿ ಇಲ್ಲಿಯವರೆಗೆ 'ಜೀವರಕ್ಷಕ ಉಡಾನ್' ಯೋಜನೆಯ 288 ವಿಮಾನಗಳು ಇಲ್ಲಿಯವರೆಗೆ ದೇಶಾದ್ಯಂತ 2.87 ಲಕ್ಷ ಕಿಮೀ ಸಂಚರಿಸಿದ್ದು, ವೈದ್ಯಕೀಯ ಉಪಕರಣಗಳನ್ನು ಪೂರೈಸಿದೆ. ಉಡಾನ್ ಯೋಜನೆಯಡಿ ಏರ್ ಇಂಡಿಯಾ, ಅಲಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ವಿಮಾನಗಳು. ಈ ವಿಮಾನಗಳು ಏರ್ ಇಂಡಿಯಾ ಮತ್ತು ಅಲಯನ್ಸ್ ಏರ್ ಕಂಪನಿಗಳಿಂದ ಸಂಚರಿಸಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಪವನ್ ಹಾನ್ಸ್ ಹೆಲಿಕಾಪ್ಟರ್ ಏಪ್ರಿಲ್ 17ರವರೆಗೆ 6265 ಕಿಮೀವರೆಗೆ 1.86 ಟನ್ ಸರಕು ಸಾಗಿಸಿದೆ. ಈ ಯೋಜನೆಗಳು ವಿಶೇಷವಾಗಿ ಈಶಾನ್ಯ ಪ್ರದೇಶ, ದ್ವೀಪಗಳು ಮತ್ತು ಬೆಟ್ಟಗುಡ್ಡಗಳಿಗೆ ಆದ್ಯತೆ ನೀಡಿವೆ.