ಕೊಟ್ಟೂರು ಬಸ್ ಸ್ಟ್ಯಾಂಡೋ ! ಅಥವಾ ಕುಡುಕರ ಸ್ಟ್ಯಾಂಡೊ?
ಕೊಟ್ಟೂರು: ಕೊಟ್ಟೂರು ತಾಲ್ಲೂಕು ಕೇಂದ್ರ ವಿಜಯನಗರ ಜಿಲ್ಲೆಯಲ್ಲೇ ಅತ್ಯಂತ್ಯ ಪ್ರಸಿದ್ಧವಾದ ಧಾರ್ಮಿಕ ಹಾಗೂ ಜಾಗೃತಸ್ಥಳ , ಕೊಟ್ಟೂರಿನಲ್ಲಿ ಹೆಸರಾಂತ ಅನೇಕ ಶಿಕ್ಷಣ ಸಂಸ್ಥೆಗಳು ಇದ್ದು , ವಿದ್ಯೆ ಹರಸಿ ಕೊಟ್ಟೂರು ನಗರಕ್ಕೆ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದು, ಅಲ್ಲದೇ ಕೊಟ್ಟೂರು ಕ್ಷೇತ್ರನಾಥ ಶ್ರೀಗುರು ಕೊಟ್ಟೂರೇಶ್ವರ ದೇವಸ್ಥಾನ ಕರ್ನಾಟಕದ್ಯಂತ ಮನೆಮಾತಾಗಿದ್ದು, ಲಕ್ಷಾಂತರ ಭಕ್ತರು ಇದ್ದು, ಸಾವಿರಾರು ಭಕ್ತರು ದಿನಾ:ಪ್ರತಿ ದರ್ಶನಕ್ಕೇ ಕೊಟ್ಟೂರಿಗೆ ಅಗಮಿಸುತ್ತಿದ್ದಾರೆ, ವಿಜಯನಗರ ಜಿಲ್ಲೇಯಲ್ಲೇ ಅತಿಹೆಚ್ಚು ವಹಿವಾಟು ನೆಡೆಸುವ ಕೃಷಿ ಉತ್ಪನ್ನ ಮಾರುಕಟ್ಟೆ ಸಹ ಇದ್ದು ದಿನಪ್ರತಿ ಸಾವಿರಾರು ರೈತರು ನಗರಕ್ಕೇ ಅಗಮಿಸಿ ವಹಿವಾಟು ಮಾಡುತ್ತಿದ್ದಾರೆ. ಅತಿ ಹೆಚ್ಚಿನ ತೆರಿಗೆ ಸಂಗ್ರಹ ತಾಲ್ಲೂಕು ಅದರೂ ಸಹ ಇಲ್ಲಿ ಒಂದು ಸುಸಜ್ಜಿತ ಬಸ್ ನಿಲ್ದಾಣ ಇಲ್ಲದೇ ಇರುವುದು ದುರಂತವೇ ಸರಿ.
ಇಲ್ಲಿನ ಶಾಸಕರು ಹೇಳುವ ಪ್ರಕಾರ ಈಗಾಗಲೇ ಸುಸಜ್ಜಿತ ಬಸ್ ನಿಲ್ದಾಣದ ನವೀಕರಣಕ್ಕೇ ಟೆಂಡರ್ ಕರೆಲಾಗಿದ್ದು, ಶೀಘ್ರದಲ್ಲೇ ಕೆಲಸ ಅರಂಭಿಸುವುದಾಗಿ ಹೇಳುತ್ತಾರೆ. ಯಾವಾಗ ಎಂಬ ಮಾತಿಗೆ ಮಾತ್ರ ಇಲ್ಲಿಯ ನಿಯಂತ್ರಣಾಧಿಕಾರಿಗಳು ಸಂಬಂಧ ಪಟ್ಟ ಅಧಿಕಾರಿಗಳು ವಿಚಾರಿಸಿದಾಗಿ ನಮಗೆ ಗೊತ್ತಿಲ್ಲವೆಂಬ ಹಾರಿಕೆ ಉತ್ತರ ನೀಡುತ್ತಾರೆ. ಈಗಾಗಲೇ ಇಲ್ಲಿಯ ಬಸ್ ನಿಲ್ದಾಣದ ಒಳಗಡೆ ಇದ್ದ ಕ್ಯಾಂಟಿನ್ ಹಾಗೂ ಸ್ಟಾಲ್ ಗಳ ಮಾಲೀಕರು ಈ ತಿಂಗಳ 10ರಂದೇ ಖಾಲಿ ಮಾಡಿಸಿದ್ದು, ಇನ್ನೂ ನವೀಕರಣದ ಕೆಲಸ ರೂಪರೇಷ ಮಾತ್ರ ಜನತೆಗೇ ನಿಗೂಢವಾಗಿದೆ, ಈಗ ಸದ್ಯದ ಪರಿಸ್ಥಿತಿಯಲ್ಲಿ ಬಸ್ ನಿಲ್ದಾಣದ ಒಳಗಡೆ ಕುಡುಕರ , ಮೊಬೈಲ್ ಕಳ್ಳರ , ಪಿಕ್ ಪ್ಯಾಕೇಟ್ ಕಳ್ಳರ ಹಾವಳಿ ದಿನದಿಂದ ದಿನಕ್ಕೇ ಮಿತಿಮೀರುತ್ತಿದ್ದು , ಇಲ್ಲೊಂದು ಪೋಲೀಸ್ ಚೌಕ ಹಾಕಬೇಕೆಂಬದು ಅನೇಕ ನಾಗರೀಕರ ಒತ್ತಾಯವಾಗಿದೆ.
ಎಲ್ಲೆಂದರಲ್ಲಿ ಕುಡಿದು ಬಸ್ ನಿಲ್ದಾಣದ ಅವರಣದೊಳಗೆ ಅಡ್ಡಾ ದಿಡ್ಡಿ ಮಲಗುತ್ತಿದ್ದು, ಬಸ್ ನಿಲ್ದಾಣ ಹೋಗಿ ಕುಡುಕರ ನಿಲ್ದಾಣವಾಗಿ ಮಾರಿ್ಟದೆ. ಲಾಡ್ಜ್ ನಲ್ಲಿ ಮಲಗಿ ಇರುವ ತರ ಬಸ್ ನಿಲ್ದಾಣದ ಅವರಣದಲ್ಲೇ ಮಲಗಿರುತ್ತಾರೆ. ದಿನನಿತ್ಯ ಬರುವ ಕೊಟ್ಟೂರೇಶ್ವರ ಸ್ವಾಮಿ ಭಕ್ತರಿಗೆ, ಶಾಲಾ ಹಿ ಕಾಲೇಜು ವಿದ್ಯಾರ್ಥಿಗಳಿಗೆ , ಮಹಿಳೆಯರಿಗೆ ವೃದ್ಧರಿಗೆ ವಿಪರೀತಾ ಕಿರಿ ಕಿರಿಯಾಗುತ್ತಿದ್ದು, ಸಂಭಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹೊಸ ನವೀಕರಣ ಬಸ್ ನಿಲ್ದಾಣ ಯಾವಾಗ ಅಗಬಹುದೆಂಬ ನೀರೀಕ್ಷೆಯಲ್ಲಿ ಜಾತಕ ಪಕ್ಷಿಯಗಳಂತೆ ಕಾಯುತ್ತಿದ್ದಾರೆ.
ಈಗಾಲಾದರೂ ಸಂಭಂಧಪಟ್ಟ ಅಧಿಕಾರಿಗಳು ಬೇಗನೇ ಕೆಲಸ ಪ್ರಾರಂಭ ಮಾಡಿದಲ್ಲಿ , ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುವುದಲ್ಲಿ ಅನುಮಾನವೇ ಇಲ್ಲಾ , ಜನರು ನೆಮ್ಮದಿಯಿಂದ ಪ್ರಯಾಣಿಸಲು ಬಸ್ ನಿಲ್ದಾಣದಲ್ಲಿ ಸಕಲ ಸೌಲಭ್ಯವುಳ್ಳ ಸುಸಜ್ಜಿತ ಬಸ್ ನಿಲ್ದಾಣಕ್ಕಾಗಿ ಕಾಯುತ್ತಿದ್ದಾರೆ.