ಬಾಗಲಕೋಟೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಬಾಗಲಕೋಟೆ ನಗರ ಪೊಲೀಸ್ ಠಾಣೆ ಒಳಗೊಂಡ ತಂಡವು ಕೋಟ್ಪಾ-2003ರ ಕಾಯಿದೆ ಅಡಿಯಲ್ಲಿ ಬಾಗಲಕೋಟೆ ನಗರದಲ್ಲಿ ಮಂಗಳವಾರ ಕಾಯರ್ಾಚರಣೆ ನಡೆಸಿ 31 ಪ್ರಕರಣಗಳನ್ನು ದಾಖಲಿಸಿದೆ.
ತಂಬಾಕು ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಪಾನ್ಶಾಪ್ ಅಂಗಡಿಗಳ ಮೇಲೆ ನಡೆಸಿದ ಕಾಯರ್ಾಚರಣೆಯಲ್ಲಿ ತಂಬಾಕು ಉತ್ಪನ್ನಗಳ ಅಧಿನಿಯಮ-2003ರ ಸೆಕ್ಷನ್ 4 ಹಾಗೂ 6 ರಲ್ಲಿ ಒಟ್ಟು 31 ಪ್ರಕರಣಗಳನ್ನು ದಾಖಲಿಸಿ ಒಟ್ಟು 4600 ರೂ.ಗಳ ದಂಡವನ್ನು ಸ್ಥಳದಲ್ಲಿಯೇ ವಿಧಿಸಿ, ನಿಯಮಬಾಹಿರವಾಗಿ ಅಳವಡಿಸಿದ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಯಿತು.
ಕಾಯರ್ಾಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ಜಿಲ್ಲಾ ತಂಬಾಕು ಸಲಹೆಗಾರರಾದ ಶಶಿಕಾಂತ ಕುಮಠಳ್ಳಿ, ಸಮಾಜ ಕಾರ್ಯಕರ್ತರಾದ ಶಿವಲಿಂಗ ಕರಗಣ್ಣಿ, ಬಾಗಲಕೋಟೆ ನಗರ ಪೋಲಿಸ್ ಠಾಣೆಯ ಪಿ.ಎಸ್.ಐ ಶಿವಶಂಕರ್ ಮುಕ್ರಿ ಹಾಗೂ ಸಿಬ್ಬಂದಿಗಳು ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಹಿರಿಯ ಆಹಾರ ಸುರಕ್ಷತಾ ಅಧಿಕಾರಿಗಳಾದ ಎಂ.ಎನ್.ವೆಂಕಟೇಶ ಮತ್ತು ರಾಷ್ಟ್ರೀಯ ಬಾಲಕಾಮರ್ಿಕ ಯೋಜನೆಯ ಯೋಜನಾ ನಿದರ್ೇಶಕರಾದ ಸುಧಾಕರ ಬಡಿಗೇರ ಇದ್ದರು.